ETV Bharat / state

ಆರಂಭದ ದಿನವೇ ಕೊಳ್ಳೇಗಾಲ ಜಿಪ್​​ಲೈನ್​ಗೆ​ ಗುಡ್​ ರೆಸ್ಪಾನ್ಸ್​​​​​: ನೀವೂ ತಪ್ಪದೇ ಭೇಟಿ ನೀಡಿ..! - ಮರಡಿಗುಡ್ಡ ವೃಕ್ಷ ವನ ಜಿಪ್​ ಲೈನ್​ ಗೇಮ್​​

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನೂತನವಾಗಿ ಜಿಪ್​​ ಲೈನ್​ ಸಾಹಸ ಕ್ರೀಡೆಯನ್ನು ಆರಂಭಿಸಲಾಗಿದೆ. ಮೊದಲನೇ ದಿನವೇ ಉತ್ತಮ ರೆಸ್ಪಾನ್ಸ್​​​​ ಸಿಕ್ಕಿದ್ದು, ಲಾಕ್​ಡೌನ್​ನಿಂದ ಮನೆಯಲ್ಲಿ ಲಾಕ್​ ಆಗಿದ್ದ ಜನರ ಬೇಸರ ಮರೆಸಲು ಅರಣ್ಯ ಇಲಾಖೆ 20 ಲಕ್ಷ ರೂ. ವೆಚ್ಚದಲ್ಲಿ ಈ ಯೋಜನೆ ರೂಪಿಸಿದೆ.

Zip line started in kollegala
ಜಿಪ್​ ಲೈನ್
author img

By

Published : Aug 12, 2021, 6:48 PM IST

ಕೊಳ್ಳೇಗಾಲ: ನಗರದ ಮರಡಿಗುಡ್ಡ ವೃಕ್ಷ ವನದಲ್ಲಿ ನೂತನವಾಗಿ ಅಳವಡಿಸಿರುವ ಜಿಪ್​​​ಲೈನ್ ಸಾಹಸ ಕ್ರೀಡೆಯು ಪ್ರವಾಸಿಗರ ಕೇಂದ್ರ ಬಿಂದುವಾಗಿದೆ. 20 ಲಕ್ಷ ವೆಚ್ಚದಲ್ಲಿ ಲಾಕ್​ಡೌನ್​ನಲ್ಲಿ ಪ್ರಾರಂಭಗೊಂಡ ಕಾಮಗಾರಿ ಪೂರ್ಣಗೊಂಡಿದ್ದು, ಗಡಿ ಜಿಲ್ಲೆಯಲ್ಲಿಯ ಜನರಿಗೆ ಮೊದಲ ಭಾರಿಗೆ ಜಿಪ್ ಲೈನ್ ಕ್ರೀಡೆ ಆಡುವ ಅವಕಾಶ ಕಲ್ಪಿಸಿದೆ.

ಆರಂಭದ ದಿನವೇ ಕೊಳ್ಳೇಗಾಲ ಜಿಪ್​ ಲೈನ್​ ಗುಡ್​ ರೆಸ್ಪಾನ್ಸ್

ಮೊದಲ ದಿನವೇ ಯುವಕರ ಗುಂಪು ಗುಂಪಾಗಿ ಜಿಪ್​ಲೈನ್​​​ ಕ್ರೀಡೆ ಆಡಲು ಬರುತ್ತಿದ್ದಾರೆ.​ ಅಲ್ಲದೇ, ಬೆಟ್ಟದ ತಪ್ಪಲಿನಲ್ಲಿ ಹಾಗೂ ದೂರದ ಮನೆ ಮಹಡಿಗಳ ಮೇಲೆ ಜನರು ನಿಂತು ಸವಾರಿಗರನ್ನು ನೋಡಿ ಖುಷಿಪಡುತ್ತಿದ್ದಾರೆ.

ಜಿಪ್ ಲೈನ್ ಝುಲಕ್ ಸೆರೆಹಿಡಿಯಲು ಸೆಲ್ಫಿ ಸ್ಟಿಕ್: ಜಿಪ್ ಲೈನ್ ಸವಾರರಿಗೆ ಅತ್ಯಾಧುನಿಕ 4k ಗೋ ಪ್ರೋ ಕ್ಯಾಮರಾ ಸೆಲ್ಫಿ ಸ್ಟಿಕ್ ನೀಡಲಾಗುತ್ತದೆ. ತಂತಿ ಮೂಲಕ ತೇಲುವ ರೋಚಕ ಕ್ಷಣವನ್ನು ಸ್ವತಃ ಸವಾರರೇ ಸೆರೆಹಿಡಿಯಬಹುದಾಗಿದೆ.

Zip line started in kollegala
ಜಿಪ್ ಲೈನ್ ಝುಲಕ್ ಸೆರೆಹಿಡಿಯಲು ಸೆಲ್ಫಿ ಸ್ಟಿಕ್

ಕಡಿಮೆ ದರ: ವಯಸ್ಕರಿಗೆ 60 ರೂ. ಮಕ್ಕಳಿಗೆ 30 ರೂ. ಅನ್ನು ಜಿಪ್ ಲೈನ್ ಸವಾರಿಗೆ ನಿಗದಿ ಮಾಡಲಾಗಿದ್ದು, ಕಡಿಮೆ ಖರ್ಚಿನಲ್ಲಿ ಹೆಚ್ಚು ಖುಷಿ ಕ್ಷಣಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಗಡಿ ಜಿಲ್ಲೆಯಲ್ಲೇ ಇದೇ ಮೊದಲ ಜಿಪ್ ಲೈನ್ : ಇದೆ ಮೊದಲ ಭಾರಿಗೆ ಚಾಮರಾಜನಗರ ಜಿಲ್ಲೆಯ ಮರಡಿಗುಡ್ಡ ವೃಕ್ಷವನದಲ್ಲಿ ಜಿಪ್ ಲೈನ್ ಪ್ರಾರಂಭವಾಗಿದೆ. ನೂರಾರು ಮೀಟರ್ ಎತ್ತರದಿಂದ 200 ಮೀ ದೂರಕ್ಕೆ ಪ್ರವಾಸಿಗರು ಸಾಗ ಬಹುದಾಗಿದೆ. ಮುಂದಿನ ದಿನಗಳಲ್ಲಿ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹನೂರು ಸೇರಿದಂತೆ ಸುತ್ತಮುತ್ತಲಿನ ಜನರು ಹೆಚ್ಚು ಭೇಟಿ ನೀಡುವ ನಿರೀಕ್ಷೆ ಇದೆ. ಕ್ರೀಡೆಯಾಡಲು ರಕ್ಷಣಾ ಸಲಕರಣೆಗಳನ್ನು ನೀಡಲಾಗುತ್ತದೆ. ಕೋವಿಡ್ ನಿಯಮವಳಿಯಂತೆ ಸಾನಿಟೈಸ್, ಮಾಸ್ಕ್ ಧಾರಣೆಯೊಂದಿಗೆ ಆಟವಾಡಲು ಅವಕಾಶ ನೀಡಲಾಗಿದೆ.

ಪ್ರವಾಸಿಗ ವಿನಯ್ ಈಟಿವಿ ಭಾರತದೊಂದಿಗೆ ಮಾತನಾಡಿ, ಮರಡಿಗುಡ್ಡ ಪಾರ್ಕ್​ನಲ್ಲಿ ನಿರ್ಮಿಸಲಾಗಿರುವ ನೂತನ ಜಿಪ್ ಲೈನ್ ಸವಾರಿ ಬಹಳ ಖುಷಿ ತಂದಿದೆ. ಜಿಲ್ಲೆಯಲ್ಲೇ ಮೊದಲು ಎಂಬುವುದು ಇದರಲ್ಲಿ ವಿಶೇಷ ಹಾಗೂ ಕಡಿಮೆ ದರದಲ್ಲಿ ಪ್ರವಾಸಿಗರಿಗೆ ಮನರಂಜನೆ ನೀಡಲು ಮುಂದಾಗಿರುವ ಅರಣ್ಯ ಇಲಾಖೆಗೆ ಧನ್ಯವಾದ ಎಂದರು.

ಜಿಲ್ಲೆಯ ಸುತ್ತ ಮುತ್ತಲ ಜನರು ಹಾಗೂ ವಿವಿಧ ಕಡೆಗಳಿಂದ ಆಗಮಿಸುವ ಪ್ರವಾಸಿಗರಿಗೆ ಮನರಂಜನೆ ನೀಡುವ ಉದ್ದೇಶದಿಂದ ಜಿಪ್ ಲೈನ್ ಪ್ರಾರಂಭಿಸಿದ್ದೇವೆ. ಆರಂಭದಲ್ಲೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ ಎಂದು ಡಿಸಿಎಫ್ ಏಡುಕೊಂಡಲು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.