ಕೊಳ್ಳೇಗಾಲ : ಎಂದಿನಂತೆ ರಾತ್ರಿ ಮನೆಯಲ್ಲಿ ಮಲಗಿದ್ದ ಯುವತಿಯೊರ್ವಳು ಬೆಳಗ್ಗೆ ಆಗುವಷ್ಟರಲ್ಲಿ ನಾಪತ್ತೆಯಾಗಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ಟಗರಪುರ ಗ್ರಾಮದ ಕೃತಿಕಾ (18) ನಾಪತ್ತೆಯಾದ ಯುವತಿ. ಮಾ.20ರಂದು ರಾತ್ರಿ ಕುಟುಂಬದ ಸದಸ್ಯರೊಡನೆ ಊಟ ಮಾಡಿ, ಓದಿ ಮಲಗುವುದಾಗಿ ರೂಮ್‌ಗೆ ತೆರಳಿದ್ದ ನನ್ನ ಮಗಳು ಕೃತಿಕಾ ಬೆಳ್ಳಗೆ ನೋಡುವಷ್ಟರಲ್ಲಿ ನಾಪತ್ತೆಯಾಗಿದ್ದಳು. ಮನೆಯ ಮುಖ್ಯ ಬಾಗಿಲು ತೆರದಿತ್ತು.
ಮನೆಯ ರೂಮ್ ನೋಡಲಾಗಿ ಆಕೆಯ ಮೊಬೈಲ್ ಹಾಗೂ ಪರ್ಸ್ ಮನೆಯಲ್ಲಿಯೇ ಇಟ್ಟಿದ್ದಳು. ಸ್ನೇಹಿತರು ಹಾಗೂ ಸಂಬಂಧಿಗಳನ್ನು ವಿಚಾರಿಸಿದರೂ ಪತ್ತೆಯಾಗಲಿಲ್ಲ ಎಂದು ಕೃತಿಕಾ ತಂದೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಗಳನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವತಿಯ ಪತ್ತೆಗೆ ಕ್ರಮ ವಹಿಸಿದ್ದಾರೆ.