ETV Bharat / state

ಮಾದಪ್ಪನ ಬೆಟ್ಟದಲ್ಲಿ ಯುವಕ ಜಲಸಮಾಧಿ: ಸ್ನೇಹಿತರ ಎದುರೇ ಕೊಚ್ಚಿಹೋದ ಗೆಳೆಯ - ಚಾಮರಾಜನರ ಸುದ್ದಿ

ಮಲೆಮಹದೇಶ್ವರ ಬೆಟ್ಟದಲ್ಲಿನ ಅಂತರಗಂಗೆ ಹಿನ್ನೀರಿನಲ್ಲಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಸ್ನೇಹಿತರ ಎದುರೇ ಕೊಚ್ಚಿಹೋದ ಗೆಳೆಯ
author img

By

Published : Aug 4, 2019, 3:12 PM IST

ಚಾಮರಾಜನಗರ: ಸ್ನೇಹಿತರ ಎದುರೇ ಗೆಳೆಯನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಮಲೆಮಹದೇಶ್ವರ ಬೆಟ್ಟದಲ್ಲಿನ ಅಂತರಗಂಗೆ ಹಿನ್ನೀರಿನಲ್ಲಿ ನಡೆದಿದೆ.

ಬೆಂಗಳೂರಿನ ಜಯನಗರ ನಿವಾಸಿ ಪ್ರಭು ಮೃತಪಟ್ಟ ದುರ್ದೈವಿ.

ಈತ 9 ಮಂದಿ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದ ವೇಳೆ ಈ ಅವಘಡ ಸಂಭವಿಸಿದೆ.

ಪ್ರವಾಸಕ್ಕೆ ತೆರಳಿದ್ದ ಸ್ನೇಹಿತರಲ್ಲಿ ಈಜು ಬರುತ್ತಿದ್ದದ್ದು ಮೃತ ಪ್ರಭುವಿಗೆ ಮಾತ್ರ ಎಂದು ತಿಳಿದುಬಂದಿದೆ. ಉಳಿದವರು ದಡದಲ್ಲಿ ನೀರಿನಾಟ ಆಡುತ್ತಿರಬೇಕಾದರೇ ಈತ ಈಜಾಡುವುದಕ್ಕೆ ಶುರು ಮಾಡಿದ್ದಾನೆ ಎನ್ನಲಾಗಿದೆ.

ಸ್ನೇಹಿತರ ಎದುರೇ ಕೊಚ್ಚಿಹೋದ ಗೆಳೆಯ

ಮುಳುಗುತ್ತಿದ್ದ ಸ್ನೇಹಿತನನ್ನು 8 ಮಂದಿ ಈಜು ಬಾರದ ಗೆಳೆಯರು ಮೂಕಪ್ರೇಕ್ಷಕರಾಗಿ ಕೂಗಾಡಿ ಕೊನೆಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ‌.

ಮಲೆಮಹದೇಶ್ವರ ಬೆಟ್ಟ ಪೊಲೀಸರು ಶವ ಹುಡುಕಾಟದ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Intro:ಮಾದಪ್ಪನ ಬೆಟ್ಟದಲ್ಲಿ ಯುವಕ ಜಲಸಮಾಧಿ: ಸ್ನೇಹಿತರ ಎದುರೇ ನೀರಿನಲ್ಲಿ ಮುಳುಗಿದ ಕುಚ್ಚಿಕು

ಚಾಮರಾಜನಗರ:
ಸ್ನೇಹಿತರ ಎದುರೇ ಕುಚ್ಚಿಕು ಗೆಳೆಯನೋರ್ವ ನೀರಿನಲ್ಲಿ ಮುಳುಗಿದ ಘಟನೆ ಮಲೆಮಹದೇಶ್ವರ ಬೆಟ್ಟದಲ್ಲಿನ ಅಂತರಗಂಗೆ ಹಿನ್ನೀರಿನಲ್ಲಿ ನಡೆದಿದೆ.

Body:
ಬೆಂಗಳೂರಿನ ಜಯನಗರ ನಿವಾಸಿ ಪ್ರಭು ಮೃತಪಟ್ಟ ದುರ್ದೈವಿ. ೯ ಮಂದಿ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದ ವೇಳೆ ಅವಘಡ ಸಂಭವಿಸಿದೆ.

೯ ಮಂದಿ ಸ್ನೇಹಿತರಲ್ಲಿ ಈಜು ಬರುತ್ತಿದುದು ಮೃತ ಪ್ರಭುವಿಗೆ ಮಾತ್ರ ಎಂದು ತಿಳಿದುಬಂದಿದ್ದು, ಉಳಿದವರು ದಡದಲ್ಲಿ ನೀರಿನಾಟ ಆಡುತ್ತಿರಬೇಕಾದರೇ ಪ್ರಭು ಈಜಾಡುತ್ತಾ ಕೈ ಬಿಟ್ಟಿದ್ದಾನೆ ಎನ್ನಲಾಗಿದೆ. ಮುಳುಗುತ್ತಿದ್ದ ಸ್ನೇಹಿತನನ್ನು ೮ ಮಂದಿ ಗೆಳೆಯರು ಈಜುಬಾರದೇ ಕೇವಲ ಮೂಕಪ್ರೇಕ್ಷಕರಾಗಿ ಕೂಗಾಡಿ ಕೊನೆಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ‌.

Conclusion:ಮಲೆಮಹದೇಶ್ವರ ಬೆಟ್ಟ ಪೊಲೀಸರು ಶವ ಹುಡುಕಾಟದ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.