ಚಾಮರಾಜನಗರ : ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಸಾರ್ವಜನಿಕರಿಗರ ಸುಗಮ ಸಂಚಾರಕ್ಕೆ ಸಹಾಯ ಮಾಡುವುದನ್ನು ನೋಡಿರುತ್ತೀರಾ. ಆದರೆ, ಈ ಗ್ರಾಮದಲ್ಲಿ ಕಾಮಗಾರಿಯೇ ಉಲ್ಟಾ ಆಗಿದ್ದು, ಡಾಂಬರು ರಸ್ತೆ ಕಿತ್ತಾಕಿ ಮಣ್ಣಿನ ರಸ್ತೆ ಮಾಡಲಾಗಿದೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಯಳಂದೂರು ತಾಲೂಕಿನ ದುಗ್ಗಹಟ್ಟಿ ಗ್ರಾಮದ 2.5 ಕಿ.ಮೀ ಡಾಂಬಾರು ರಸ್ತೆಯನ್ನು ಕಿತ್ತು ಹಾಕಿ 30 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಮಣ್ಣಿನ ರಸ್ತೆ ಮಾಡಲಾಗಿದದೆ. ಈ ಕುರಿತಂತೆ ಗ್ರಾಪಂ ಸದಸ್ಯರು, ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಮಣ್ಣಿನ ರಸ್ತೆಯ ಬದಲು ಗುಂಡಿಬಿದ್ದ ಡಾಂಬಾರು ರಸ್ತೆಯೇ ಎಷ್ಟೋ ಮೇಲು ಎಂಬ ವಾತಾವರಣ ನಿರ್ಮಾಣವಾಗಿದೆ. ಟ್ಯ್ರಾಕ್ಟರ್, ಬೈಕ್ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಪ್ರಯಾಸ ಪಡುತ್ತಿದ್ದಾರೆ. ಇದರೊಟ್ಟಿಗೆ ರಸ್ತೆ ಬದಿ ಬೆಳೆದ ಗಿಡಗಂಟಿಗಳನ್ನು ಕತ್ತರಿಸದೆ ಹಾಗೇ ಬಿಟ್ಟಿದ್ದಾರೆ.
ರಾತ್ರಿ ಸಂಚಾರ ದುಸ್ತರವಾಗಿದೆ. ಪಕ್ಕದಲ್ಲೇ ಕಾಲುವೆಯೂ ಇದ್ದು, ನೀರು ಹೋಗಲು ದಾರಿಯಿಲ್ಲದೆ ಉಲ್ಟಾ-ಪಲ್ಟಾ ಕಾಮಗಾರಿಗೆ ಜನರು ನಿತ್ಯ ಪೀಕಲಾಟ ಅನುಭವಿಸುತ್ತಿದ್ದಾರೆ.
ಈ ಕುರಿತುಎಎಪಿ ತಾಲೂಕು ಅಧ್ಯಕ್ಷ ಕಂದಹಳ್ಳಿ ಮಹೇಶ್ ಮಾತನಾಡಿ, ಡಾಂಬಾರು ರಸ್ತೆ ಮಾಡಲು ಕೆಆರ್ಡಿಐಎಲ್ನಡಿ ಅಂದಾಜು 30 ಲಕ್ಷ ರೂ. ವೆಚ್ಚದಲ್ಲಿ ಈ ರಸ್ತೆ ನಿರ್ಮಾಣವಾಗಿದೆ. ಜಿಪಂ ಸಂಯುಕ್ತ ಅನುದಾಡಿ 2 ಲಕ್ಷ ರೂ. ನರೇಗಾ ಕಾಮಗಾರಿಯನ್ನು ಈ ರಸ್ತೆ ನಿರ್ಮಾಣಕ್ಕೆ ಬಳಸಿದ್ದಾರೆ.
ಡಾಂಬಾರು ರಸ್ತೆಯ ಜಲ್ಲಿಗಳನ್ನೇ ಬಳಸಿ ಮೇಲೊಂದಿಷ್ಟು ಮಣ್ಣು ಸುರಿದು ಸಮತಟ್ಟು ಮಾಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು, ಇಂಜಿನಿಯರ್‌ಗಳು ಈ ಕುರಿತು ಸೂಕ್ತ ಕ್ರಮ ತೆಗೆದುಕೊಂಡು ಡಾಂಬಾರು ರಸ್ತೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಗುಜರಾತ್‌ನಲ್ಲಿಂದು ಮತ್ತಿಬ್ಬರಿಗೆ ಒಮಿಕ್ರಾನ್ ; ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 146ಕ್ಕೆ ಏರಿಕೆ