ETV Bharat / state

ನಮ್ಮ ಬಜೆಟ್: ಚಾಮರಾಜನಗರದ ಜನರಲ್ಲಿ ಮಂದಹಾಸ ಮೂಡಿಸುವರೇ ಯಡಿಯೂರಪ್ಪ? - ಸಿಎಂ ಯಡಿಯೂರಪ್ಪ ಬಜೆಟ್ 2020

ರಾಜ್ಯ ಬಜೆಟ್ ಬಗ್ಗೆ ಚಾಮರಾಜನಗರ ಜಿಲ್ಲೆಯ ಜನತೆಯಲ್ಲಿ ಅಪಾರ ನಿರೀಕ್ಷೆಯಿದೆ. ಬಿ.ಎಸ್.ಯಡಿಯೂರಪ್ಪ ಈ ಬಾರಿ ನಮ್ಮ ಮೊಗದಲ್ಲಿ ಮಂದಹಾಸ ಮೂಡಿಸಲಿದ್ದಾರೆ ಎಂಬ ವಿಶ್ವಾಸ ಅವರದ್ದು.

Budget expectations of chamarajanagar people
ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ 2020
author img

By

Published : Mar 4, 2020, 7:57 PM IST

ಚಾಮರಾಜನಗರ: ರಾಜ್ಯ ಬಜೆಟ್ ಬಗ್ಗೆ ಜಿಲ್ಲೆಯ ಜನತೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿಎಂ ಯಡಿಯೂರಪ್ಪ ಜನರ ಮೊಗದಲ್ಲಿ ಮಂದಹಾಸ ಮೂಡಿಸಲಿದ್ದಾರೆ ಎಂಬ ವಿಶ್ವಾಸ ಜನರದ್ದಾಗಿದ್ದು, ಭರಪೂರ ಯೋಜನೆಯ ಆಸೆಗಣ್ಣಿದೆ.

ಜನರ ನಿರೀಕ್ಷೆ, ಬೇಡಿಕೆಗಳು ಹೀಗಿವೆ:

  • ಬಹುದಿನದ ಬೇಡಿಕೆಯಾದ ಟೊಮೇಟೊ, ಬಾಳೆ ಸಂಸ್ಕರಣ ಘಟಕ, ಎರಡನೇ ಹಂತದ ಕಬಿನಿ ಕುಡಿಯುವ ನೀರು ಯೋಜನೆ, ಪ್ರವಾಸೋದ್ಯಮಕ್ಕೆ ಉತ್ತೇಜನ.
  • ಗಡಿ ಭಾಗದಲ್ಲಿ ಕನ್ನಡ ಭವನ ನಿರ್ಮಿಸಬೇಕೆಂಬ ಬೇಡಿಕೆ, ಉಪನಗರ ನಿರ್ಮಾಣ, ಅರಿಶಿಣಪುಡಿ ತಯಾರಿಕಾ ಘಟಕ ಸ್ಥಾಪನೆಗೆ ಅನುದಾನ ಸಿಗುವ ನಿರೀಕ್ಷೆ.
  • ರೇಷ್ಮೆಗೆ ಜಿಲ್ಲೆಯಲ್ಲಿ ಮಾರುಕಟ್ಟೆ ಒದಗಿಸಲು ಸಿಲ್ಕ್ ಪಾರ್ಕ್ ನಿರ್ಮಾಣ ಮಾಡಬೇಕು ಮತ್ತು ರೇಷ್ಮೆ ಬೆಳೆಗೆ ಉತ್ತೇಜನ ನೀಡಲು ಯೋಜನೆ.
  • ಬಂಡೀಪುರ, ಬಿಳಿಗಿರಿರಂಗನ ಬೆಟ್ಟ, ಮಲೆಮಹದೇಶ್ವರ ಬೆಟ್ಟ, ಹೊಗೆನಕಲ್ ಪ್ರವಾಸಿ ಕೇಂದ್ರಗಳ ಅಭಿವೃದ್ಧಿ.
  • ಎರಡನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆ
  • ಕೊಳ್ಳೇಗಾಲ ಹಾಗೂ ಹನೂರು ತಾಲೂಕಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅನುದಾನ.
  • ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು. ನೂತನ ಆಸ್ಪತ್ರೆಗಳ ನಿರ್ಮಾಣಕ್ಕೆ ಅನುದಾನ.
  • ಕೈಗಾರಿಕೆಗಳ ಸ್ಥಾಪನೆಗೆ ಉದ್ಯಮಿಗಳನ್ನು ಆಕರ್ಷಿಸಲು ಹೊಸ ಯೋಜನೆ.

ಶಿಕ್ಷಣ ಸಚಿವ ಎಸ್.ಸುರೇಶ ಕುಮಾರ್ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ ಹಾಗೂ ಹೊಸ ಯೋಜನೆಗಳು ಘೋಷಣೆಯಾದರೆ ಜಿಲ್ಲೆಗೆ ಆದ್ಯತೆ ಕೊಡುವರೆಂಬ ನಂಬಿಕೆ ಜನರದ್ದಾಗಿದೆ. ನಾಳಿನ ಬಜೆಟ್​​ನಲ್ಲಿ ಗಡಿಜಿಲ್ಲೆ ಜನರಿಗೆ ಸಕ್ಕರೆ ನೀಡುವರೇ ಇಲ್ಲಾ ಮೂಗಿಗೆ ತುಪ್ಪ ಸವರುವರೇ? ಎಂಬುದನ್ನು ನೋಡಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.