ಚಾಮರಾಜನಗರ: ಅರಮನೆಯಿಂದ ಜನರಿಗೆ ಸಹಾಯ ಬೇಕಿದ್ದರೆ ಅದನ್ನು ಮಾಡುವುದು ನಮ್ಮ ಕರ್ತವ್ಯ. ಆ ಸಹಾಯ ರಾಜಕೀಯ ಮಾರ್ಗದ ಮೂಲಕವೇ ಮಾಡಬೇಕಾದರೆ ಆ ಮೂಲಕವೇ ಮಾಡುತ್ತೇವೆ ಎಂದು ಯದುವಂಶಸ್ಥ ಯದುವೀರ್ ಒಡೆಯರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಆಸಕ್ತಿಯ ಪ್ರಶ್ನೆಯಲ್ಲ. ಅರಮನೆಯಿಂದಾಗಬೇಕಾದ ಸಹಾಯ ಮಾಡುವುದು ನಮ್ಮ ಕರ್ತವ್ಯ. ಅರಮನೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿವೆ. ಅವೆಲ್ಲದಕ್ಕೂ ಪರಿಹಾರ ಸಿಕ್ಕ ಬಳಿಕ ರಾಜಕೀಯಕ್ಕೆ ಹೋಗಬಹುದು ಎಂದರು.
ದೇವರಾಜ ಮಾರುಕಟ್ಟೆ ನೆಲಸಮ ಕುರಿತು ಪ್ರತಿಕ್ರಿಯಿಸಿ, ಈಗಾಗಲೇ ನೇಮಿಸಿರುವ ಸಮಿತಿಯಲ್ಲಿ ಪಾರಂಪರಿಕ ಕಟ್ಟಡದ ಬಗ್ಗೆ ಜ್ಞಾನವಿರುವವರು ಇಲ್ಲ. ಕೇವಲ ಸಿವಿಲ್ ಎಂಜಿನಿಯರ್ಸ್ ಮಾತ್ರ ಇದ್ದಾರೆ. ನೆಲಸಮ ಮಾಡುವ ಬದಲು ಪಾರಂಪರಿಕ ಕಟ್ಟಡವನ್ನ ಉಳಿಸಬಹುದು ಎಂದರು.
ಜನ ಪ್ಲಾಸ್ಟಿಕ್‌ನಿಂದಾಗುವ ಅನಾಹುತ ಅರಿಯಬೇಕಿದೆ. ಪ್ಲಾಸ್ಟಿಕ್ ಬಳಸುವುದನ್ನು ನಾವು ನಿಲ್ಲಿಸಬೇಕಿದೆ. ಈ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲು ಚಿಂತಿಸಲಾಗಿದೆ ಎಂದರು.