ETV Bharat / state

ಶೀಲ ಶಂಕಿಸಿ ಕಿರುಕುಳ: ಕೊಳ್ಳೇಗಾಲದಲ್ಲಿ ಗೃಹಿಣಿ ಆತ್ಮಹತ್ಯೆ - Basavana Bagewadi of Bijapur

ಪತ್ನಿಯ ಶೀಲ ಶಂಕಿಸಿ ನಿತ್ಯ ಕುಡಿದು ಜಗಳವಾಡುತ್ತಿದ್ದ ಪತಿ ವರ್ತನೆಗೆ ಬೇಸತ್ತು ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

woman committed suicide in Kollegala
ಶೀಲ ಶಂಕಿಸಿ ಕಿರುಕುಳ: ಕೊಳ್ಳೇಗಾಲದಲ್ಲಿ ಗೃಹಿಣಿ ಆತ್ಮಹತ್ಯೆ
author img

By

Published : Aug 10, 2020, 2:12 PM IST

ಕೊಳ್ಳೇಗಾಲ(ಚಾಮರಾಜನಗರ): ಪತ್ನಿಯ ಶೀಲ ಶಂಕಿಸಿ ನಿತ್ಯ ಕುಡಿದು ಜಗಳವಾಡುತ್ತಿದ್ದ ಪತಿ ವರ್ತನೆಗೆ ಬೇಸತ್ತು ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ಹಬ್ಬಿಹಳ್ಳ ಗ್ರಾಮದ ನಿವಾಸಿ ಮೀನಾಕ್ಷಿ(29) ಮೃತಪಟ್ಟ ದುರ್ದೈವಿ. ಈಕೆಯ ಪತಿ ಸಿದ್ದಪ್ಪ ಕುಂಬಾರ ಬಸ್ ಕಂಡಕ್ಟರ್ ಆಗಿದ್ದು, ಇಬ್ಬರೂ ಪಟ್ಟಣದ ಮಹದೇಶ್ವರ ಕಾಲೇಜಿನ ಸಮೀಪದ ಮನೆಯೊಂದರಲ್ಲಿ ವಾಸವಿದ್ದರು.

ಪತಿ ಸಿದ್ದಪ್ಪ ನಿತ್ಯ ಕುಡಿದು ಬಂದು ಜಗಳವಾಡುತ್ತಿದ್ದ. ಅಲ್ಲದೇ, ಪತ್ನಿ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತಿದ್ದ ಮೀನಾಕ್ಷಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಅಣ್ಣ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಸದ್ಯ ಪಿಎಸ್ಐ ರಾಜೇಂದ್ರ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು,ಕಂಡಕ್ಟರ್ ಸಿದ್ದಪ್ಪ ಕುಂಬಾರನನ್ನು ವಶಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.