ಚಾಮರಾಜನಗರ : ಅನಾರೋಗ್ಯ ಇದೆ ಎಂದು ಅಳಲು ತೋಡಿಕೊಂಡ ಮಹಿಳೆಯೊಬ್ಬರಿಗೆ ಮಾಟ-ಮಂತ್ರದ ಭಯ ಹುಟ್ಟಿಸಿ ಲಕ್ಷಾಂತರ ರೂ. ಹಾಗೂ ಚಿನ್ನ ದೋಚಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ಕೊಳ್ಳೇಗಾಲದ ಭವ್ಯ ಮೋಸ ಹೋದವರು. ತಾಲೂಕಿನ ಜಿನಕನಹಳ್ಳಿಯ ಮಂತ್ರವಾದಿ ಮಹಾದೇವಸ್ವಾಮಿ ಬಂಧಿತ ಆರೋಪಿ. ಈತ ಮಹಿಳೆಯ 2 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆ ಹಾಗೂ 2.5 ಲಕ್ಷ ರೂ.ಲಪಟಾಯಿಸಲಾಗಿದೆ ಎನ್ನಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಏನಿದು ಮಾಯ-ಮಂತ್ರದ ಕಥೆ?: ಭವ್ಯ ಅವರಿಗೆ ಇತ್ತೀಚಿಗೆ ಆರೋಗ್ಯ ಬಿಗಡಾಯಿಸುತ್ತಿದ್ದರಿಂದ ಈ ಮಂತ್ರವಾದಿ ಬಳಿ ತೆರಳಿ ಅಳಲು ತೋಡಿಕೊಂಡಿದ್ದಾರೆ. ಅದಕ್ಕೆ, ಮಾಟ-ಮಂತ್ರದ ಕಥೆ ಕಟ್ಟಿ ಪೂಜೆ ಮಾಡಿದರೆ ಸರಿಹೋಗಲಿದೆ ಎಂದು ನಂಬಿಸಿದ್ದಾನೆ.
ಅದರಂತೆ, ಕಳೆದ ಆಗಸ್ಟ್ 9ರ ರಾತ್ರಿ ಮನೆಗೆ ಬಂದು ಕುಡಿಕೆಯೊಂದನ್ನು ಇಟ್ಟು ಒಡವೆ, ನಗದು ಇದರಲ್ಲಿ ಹಾಕಿ ಪೂಜೆ ನಂತರ ಕೊಡುತ್ತೇನೆ ಎಂದು ಸರ, ಓಲೆ, ಹಣ ಎಲ್ಲವನ್ನೂ ಪಡೆದು ಕುಡಿಕೆಯೊಳಗೆ ಇರಿಸಿಕೊಂಡಿದ್ದನಂತೆ. ಬಳಿಕ, ಕಪ್ಪು ಬಣ್ಣದ ಪೇಸ್ಟೊಂದನ್ನು ಹಣೆಗೆ ಇಟ್ಟಿದ್ದು, ಭವ್ಯ ಮೂರ್ಛೆ ಹೋಗಿದ್ದಾರಂತೆ. ಬಳಿಕ ಮಹಾದೇವಸ್ವಾಮಿ ಹಣ, ಒಡವೆ ಲಪಟಾಯಿಸಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಕಳೆದ ಜನವರಿ 1ರಂದು ವಂಚನೆಗೊಳಗಾದ ಮಹಿಳೆ ದೂರು ಕೊಟ್ಟಿದ್ದಾರೆ. ದೂರು ಪಡೆದ ಕೊಳ್ಳೇಗಾಲ ಪಟ್ಟಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ : ತಾಯಿಯ ಉಪಾಯದಿಂದ ತಂದೆ ಅಂದರ್!