ಚಾಮರಾಜನಗರ: ಕಾಡಾನೆಯೊಂದು ರಸ್ತೆಬದಿ ಅಸ್ವಸ್ಥಗೊಂಡು ಬಿದ್ದು ನರಳಾಡುತ್ತಿರುವ ಘಟನೆ ಹನೂರು ತಾಲೂಕಿನ ಅಜ್ಜೀಪುರ ಕಣಿವೆ ಸಮೀಪದ ರಸ್ತೆಬದಿ ನಡೆದಿದೆ.
ಕಳೆದ 1 ವಾರದಿಂದ ರೈತರ ಜಮೀನುಗಳಿಗೆ ಲಗ್ಗೆ ಇಡುತ್ತಿದ್ದ ಸಲಗ ಸಾಕಷ್ಟು ಬೆಳೆ ಹಾನಿ ಮಾಡಿ ಸಂಕಷ್ಟಕ್ಕೆ ದೂಡಿತ್ತು. ಕೆಲ ದಿನಗಳ ಹಿಂದೆಯಷ್ಟೇ ಏಕಾಏಕಿ ರಸ್ತೆಗೆ ಬಂದಿದ್ದ ಕಾಡಾನೆ ಕಂಡು ಬೈಕ್ ಸವಾರನೊಬ್ಬ ಬಿದ್ದು ಓಡಿಹೋಗಿದ್ದ ಪ್ರಸಂಗವೂ ನಡೆದಿತ್ತು.
ಮೇಲ್ನೋಟಕ್ಕೆ ಆನೆ ಅನಾರೋಗ್ಯದಿಂದ ಬಳಲುತ್ತಿರುವಂತೆ ಕಾಣುತ್ತಿದ್ದು ರಸ್ತೆ ಬದಿಯಲ್ಲಿ ಬಿದ್ದು ಮೇಲೇಳಲು ಸಾಧ್ಯವಾಗದೇ ನರಳಾಡುತ್ತಿದೆ. ಸದ್ಯ, ಹನೂರು ವಲಯ ಆರ್ಎಫ್ಒ ಸುಂದರ್ ಮತ್ತು ಸಿಬ್ಬಂದಿ ದೌಡಾಯಿಸಿದ್ದು, ಜೆಸಿಬಿ ಮೂಲಕ ಆನೆ ಮೇಲೆತ್ತಿ ಆರೈಕೆ ಮಾಡಲು ಮುಂದಾಗಿದ್ದಾರೆ.