ETV Bharat / state

ಫೇಸ್​​ಬುಕ್​​ ಮೂಲಕ ಲವ್​ ಆಗಿ ಮದುವೆ... ಹಣಕಾಸಿನ ವಿಚಾರಕ್ಕೆ ಗಂಡನ ಕೊಲೆ!

ಹಣಕಾಸಿನ ವಿಚಾರಕ್ಕೆ ತನ್ನ ಸಹೋದರರ ಜೊತೆಗೂಡಿ ಹೆಂಡತಿಯೊಬ್ಬಳು ತನ್ನ ಗಂಡನನ್ನೇ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

Rashmi
ರಶ್ನಿ
author img

By

Published : Jan 28, 2020, 2:57 PM IST

Updated : Jan 28, 2020, 4:42 PM IST

ಚಾಮರಾಜನಗರ: ಗಂಡನನ್ನು ಸಹೋದರರ ಜೊತೆಗೂಡಿ ಹೆಂಡತಿಯೇ ಕೊಲೆ ಮಾಡಿರುವ ಘಟನೆ ಮೈಸೂರಿನ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಣಕಾಸಿನ ವಿಚಾರಕ್ಕೆ ಗಂಡನ ಕೊಲೆ!

ಕೊಳ್ಳೇಗಾಲದ ನಿವಾಸಿ ನಾಗೇಂದ್ರಸ್ವಾಮಿ ಎಂಬುವರ ಮಗ ಸುಬ್ರಹ್ಮಣ್ಯ ಕೊಲೆಯಾದ ವ್ಯಕ್ತಿ. ಮೈಸೂರಿನ ವಿಜಯನಗರ ನಿವಾಸಿಯಾದ ಪತ್ನಿ ರಶ್ಮಿ ಮತ್ತು ಆಕೆಯ ಮೂವರು ಸಹೋದರರು ಕೊಲೆ ಆರೋಪ ಹೊತ್ತವರಾಗಿದ್ದಾರೆ.

ವಿಚ್ಛೇದಿತ ರಶ್ಮಿಯನ್ನು ಸುಬ್ರಹ್ಮಣ್ಯ ಫೇಸ್​​ಬುಕ್ ಮೂಲಕ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು‌. ಕೆಲವು ವರ್ಷಗಳ ಹಿಂದೆ ಇಬ್ಬರೂ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ತವರು ಮನೆಯವರು ಆಸ್ತಿ ಮಾರಿ ರಶ್ಮಿ ಪಾಲಿನ 1.10 ಕೋಟಿ ರೂ. ಹಣವನ್ನು ಆಕೆಯ ಬ್ಯಾಂಕ್ ಖಾತೆಗೆ ಹಾಕಿದ್ದರು‌. ಈ ವಿಚಾರ ತಿಳಿದ ಸುಬ್ರಹ್ಮಣ್ಯ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುತ್ತೇನೆಂದು ಹಣ ಪಡೆದು 83 ಲಕ್ಷ ರೂ.ಗಳನ್ನು ಪಡೆದು ನಷ್ಟ ಹೊಂದಿದ್ದ ಎನ್ನಲಾಗಿದೆ.

83 ಲಕ್ಷ ಹಣದ ವಿಚಾರಕ್ಕೆ ಗಂಡ-ಹೆಂಡಿರ ನಡುವೆ ಪದೇ ಪದೆ ಜಗಳವಾಗುತ್ತಿತ್ತಂತೆ. ಬಳಿಕ, ನ್ಯಾಯ ಪಂಚಾಯಿತಿ ಮೂಲಕ ನಾಗೇಂದ್ರಸ್ವಾಮಿ ತಂದೆ ಆಸ್ತಿ ಮಾರಿ ಹಣ ಕೊಡಬೇಕೆಂದು ನಿರ್ಧಾರವಾಗಿತ್ತು. ಆದರೆ, ನಾಗೇಂದ್ರಸ್ವಾಮಿ ಮನೆಯವರು ತಲೆ ಕೆಡಿಸಿಕೊಳ್ಳದಿದ್ದರಿಂದ ಕುಪಿತಗೊಂಡ ರಶ್ಮಿ, ತನ್ನ ಸಹೋದರರಾದ ರಾಕೇಶ್, ರಾಕೇಶ್ ಪಡಗೂರು ಹಾಗೂ ಪ್ರದೀಪ್ ಎಂಬುವರ ಜೊತೆಗೂಡಿ ಜ. 10ರಂದು ಸುಬ್ರಹ್ಮಣ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಸುಬ್ರಹ್ಮಣ್ಯನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು‌. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜ. 26ರಂದು ಆತ ಮೃತಪಟ್ಟಿದ್ದರಿಂದ ತಂದೆ ನಾಗೇಂದ್ರಸ್ವಾಮಿ ಮೈಸೂರಿನ ವಿಜಯನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ತನ್ನ ಮನೆಗೆ ಬಂದು ದಾಂಧಲೆ ನಡೆಸಿ ಮಗನನ್ನು ಅಪಹರಿಸಿ ಉಗುರು ಕಿತ್ತು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸದ್ಯ, ವಿಜಯನಗರ ಸಿಪಿಐ ಬಾಲಕೃಷ್ಣ, ರಶ್ಮಿ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

Intro:ಫೇಸ್ಬುಕ್ ನಿಂದ ಲವ್ ಆಮೇಲೆ ಮದುವೆ... ಕೊನೆಗೇ ಹಣಕಾಸಿನ ವಿಚಾರಕ್ಕೆ ಗಂಡನ ಕೊಲೆ!

ಚಾಮರಾಜನಗರ: ಗಂಡನನ್ನು ಸಹೋದರರ ಜೊತೆಗೂಡಿ ಕೊಲೆ ಮಾಡಿರುವ ಘಟನೆ ಮೈಸೂರಿನ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Body:ಕೊಳ್ಳೇಗಾಲದ ನಿವಾಸಿ ನಾಗೇಂದ್ರಸ್ವಾಮಿ ಎಂಬವರ ಮಗ ಸುಬ್ರಹ್ಮಣ್ಯ ಕೊಲೆಯಾದ ದುರ್ದೈವಿ. ಮೈಸೂರಿನ ವಿಜಯನಗರ ನಿವಾಸಿಯಾದ ಪತ್ನಿ ರಶ್ಮಿ ಮತ್ತು ಆಕೆಯ ಮೂವರು ಸಹೋದರರು ಆರೋಪ ಹೊತ್ತವರಾಗಿದ್ದಾರೆ.

ವಿಚ್ಚೇದಿತ ರಶ್ನಿಯನ್ನು ಸುಬ್ರಹ್ಮಣ್ಯ ಫೇಸ್ ಬುಕ್ ಮೂಲಕ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು‌. ಈಗ್ಗೆ ಕೆಲವು ವರ್ಷಗಳ ಹಿಂದೆ ಇಬ್ಬರೂ ಮದುವೆಯಾಗಿ ಬಾಳ್ವೆ ನಡೆಸುತ್ತಿದ್ದರು. ತವರುಮನೆಯವರು ಆಸ್ತಿ ಮಾರಿ ರಶ್ಮಿ ಪಾಲಿನ 1.10 ಕೋಟಿ ರೂ. ಹಣವನ್ನು ಆಕೆಯ ಬ್ಯಾಂಕ್ ಖಾತೆಗೆ ಹಾಕಿದ್ದರು‌. ಈ ವಿಚಾರ ತಿಳಿದ, ಸುಬ್ರಹ್ಮಣ್ಯ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುತ್ತೇನೆಂದು ಹಣ ಪಡೆದು 83 ಲಕ್ಷ ರೂ.ವನ್ನು ಪಡೆದು ನಷ್ಟ ಹೊಂದಿದ್ದನು ಎನ್ನಲಾಗಿದೆ.

83 ಲಕ್ಷದ ವಿಚಾರಕ್ಕೆ ಗಂಡ-ಹೆಂಡಿರ ನಡುವೆ ಪದೇಪದೇ ಜಗಳವಾಗುತ್ತಿತ್ತು. ಬಳಿಕ, ನ್ಯಾಯ ಪಂಚಾಯಿತಿ ಮೂಲಕ ನಾಗೇಂದ್ರಸ್ವಾಮಿ ತಂದೆ ಆಸ್ತಿ ಮಾರಿ ಹಣ ಕೊಡಬೇಕೆಂದು ನಿರ್ಧಾರವಾಗಿತ್ತು. ಆದರೆ, ನಾಗೇಂದ್ರಸ್ವಾಮಿ ಮನೆಯವರು ತಲೆ ಕೆಡಿಸಿಕೊಳ್ಳದಿದ್ದರಿಂದ ಕುಪಿತಗೊಂಡ ರಶ್ನಿ ತನ್ನ ಸಹೋದರರಾದ ರಾಕೇಶ್, ರಾಕೇಶ್ ಪಡಗೂರು ಹಾಗೂ ಪ್ರದೀಪ್ ಎಂಬವರೊಂದುಗೂಡಿ ಕಳೆದ 10 ರಂದು ಸುಬ್ರಹ್ಮಣ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡ ಸುಬ್ರಹ್ಮಣ್ಯನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು‌ ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಳೆದ 26 ರಂದು ಆತ ಮೃತಪಟ್ಟಿದ್ದರಿಂದ ತಂದೆ ನಾಗೇಂದ್ರಸ್ವಾಮಿ ಮೈಸೂರಿನ ವಿಜಯನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ತನ್ನ ಮನೆಗೆ ಬಂದು ದಾಂಧಲೆ ನಡೆಸಿ ಮಗನನ್ನು ಅಪಹರಿಸಿ, ಉಗುರು ಕಿತ್ತು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Conclusion:
ಸದ್ಯ, ವಿಜಯನಗರ ಸಿಪಿಐ ಬಾಲಕೃಷ್ಣ ರಶ್ನಿ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

Bite- ನಾಗೇಂದ್ರಸ್ವಾಮಿ, ಮೃತನ ತಂದೆ
Last Updated : Jan 28, 2020, 4:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.