ETV Bharat / state

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತಿ, ಚೇತರಿಸಿಕೊಂಡ್ರೂ ಆತ್ಮಹತ್ಯೆ ಮಾಡಿಕೊಂಡ ಪತ್ನಿ - ಕೋವಿಡ್​ನಿಂದ ಆತ್ಮಹತ್ಯೆ

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಈ ಮಧ್ಯೆ ಜನರು ಭಯದಿಂದಲೇ ಜೀವ ಕಳೆದಕೊಳ್ಳುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಕರ್ನಾಟಕದಲ್ಲಿ ಕೊರೊನಾ ವರದಿ,ಕರ್ನಾಟಕದಲ್ಲಿ ಕೋವಿಡ್ ವರದಿ,ಕರ್ನಾಟಕದಲ್ಲಿ ಲಾಕ್​ಡೌನ್,ಭಾರತದಲ್ಲಿ ಕೋವಿಡ್,ಕರ್ನಾಟಕ ಕೊರೊನಾ ಅಪ್​ಡೇಟ,

corona death
corona death
author img

By

Published : Apr 30, 2021, 7:51 PM IST

ಚಾಮರಾಜನಗರ: ಕೊರೊನಾ ಸೋಂಕಿನಿಂದ ಪತಿ ಚೇತರಿಸಿಕೊಳ್ಳದಿರುವುದರಿಂದ ಮನನೊಂದ ಪತ್ನಿ ನೇಣಿಗೆ ಶರಣಾಗಿರುವ ಘಟನೆ ಚಾಮರಾಜನಗರ ತಾಲೂಕಿನ ದೇಸಿಗೌಡನಪುರ ಗ್ರಾಮದಲ್ಲಿ ನಡೆದಿದೆ‌.

ದೇಸಿಗೌಡನಪುರ ಗ್ರಾಮದ 64 ವರ್ಷದ ವೃದ್ಧೆ ಆತ್ಮಹತ್ಯೆ ಮಾಡಿಕೊಂಡವರು. ಮೃತರ ಪತಿಗೆ 70 ವರ್ಷ ವಯಸ್ಸಾಗಿದ್ದು, ಕಳೆದ 7 ದಿನಗಳ ಹಿಂದೆ ಈ ದಂಪತಿಗೆ ಸೋಂಕು ದೃಢಪಟ್ಟು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.

ಪತ್ನಿ ಚೇತರಿಕೆ ಕಂಡು ಗುರುವಾರ ಆಸ್ಪತ್ರೆಯಿಂದ ಹಿಂತಿರುಗಿ ಹೋಂ ಐಸೋಲೇಷನ್​ನಲ್ಲಿದ್ದರು.‌ ಆದರೆ, ಪತಿ ಚೇತರಿಕೆ ಕಾಣದಿದ್ದರಿಂದ ಹಾಗೂ ಮೃತರ ಸಂಖ್ಯೆ ಹೆಚ್ಚುತ್ತಿರುವ ಮಾಹಿತಿಯಿಂದ ಹೆದರಿ ನೇಣಿಗೆ ಶರಣಾಗಿದ್ದಾರೆ ಎಂದು ಜಿಪಂ‌ ಸದಸ್ಯ ಕೆರೆಹಳ್ಳಿ ನವೀನ್ ತಿಳಿಸಿದ್ದಾರೆ.

ಮೃತರ ಅಂತ್ಯಸಂಸ್ಕಾರವನ್ನು ಕೆರೆಹಳ್ಳಿ ನವೀನ್ ಮತ್ತು ತಂಡ ಕೋವಿಡ್ ನಿಯಮಾನುಸಾರ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.