ಚಾಮರಾಜನಗರ: ಸಂಬಳ ತಡೆಹಿಡಿದ್ದಕ್ಕೆ ವಾಟರ್ಮನ್ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂಚಾಯತ್ನ ನೀರುಗಂಟಿ ಶಿವಮಲ್ಲನಾಯ್ಕ ಆತ್ಮಹತ್ಯೆಗೆ ಯತ್ನಿಸಿದವರು. ಕಳೆದ ಒಂದು ವರ್ಷದಿಂದ ವೇತನ ನೀಡದೇ ಪಿಡಿಒ ಜುನೇದ್ ಅಹಮ್ಮದ್ ಹಾಗೂ ಗ್ರಾ.ಪಂ. ಉಪಾಧ್ಯಕ್ಷ ರವಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಇಂದು ಪಂಚಾಯತ್ ಕಚೇರಿಯಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವೇತನ ನೀಡದಿದ್ದರ ಕುರಿತು ಜಿ.ಪಂ. ಸಿಇಒ ಅವರಿಗೆ ಇಬ್ಬರ ವಿರುದ್ಧ ಶಿವಮಲ್ಲನಾಯ್ಕ ದೂರು ನೀಡಿದ್ದರು ಎಂದು ತಿಳಿದುಬಂದಿದೆ. ಸದ್ಯ, ಮೈಸೂರಿನ ಆಸ್ಪತ್ರೆಗೆ ಶಿವಮಲ್ಲನಾಯ್ಕರನ್ನು ರವಾನಿಸಲಾಗಿದೆ.