ETV Bharat / state

ಸ್ಮಶಾನಕ್ಕೆ ತೆರಳಲು ಮಳೆ ಅಡ್ಡಿ.. ಗ್ರಾ ಪಂ ಕಚೇರಿ ಮುಂದೆ ಶವ ಹೂತ ಗ್ರಾಮಸ್ಥರು! - ಸ್ಥಳೀಯ ಶಾಸಕರಿಗೆ ಮನವಿ

ಸ್ಮಶಾನಕ್ಕೆ ಹೋಗಲು ಕಾಲುವೆ ದಾಟಬೇಕಿದ್ದು, ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರಿಗೆ ಮನವಿ ಮಾಡಿದ್ದರೂ ಸೇತುವೆ ನಿರ್ಮಾಣವಾಗದ ಹಿನ್ನೆಲೆ ಗ್ರಾಮಸ್ಥರು ನಿರ್ಧಾರ ಕೈಗೊಂಡಿದ್ದಾರೆ.

villagers-buried-corpses-in-front-of-grapam
ಗ್ರಾಪಂ ಕಚೇರಿ ಮುಂದೆ ಶವ ಹೂತ ಗ್ರಾಮಸ್ಥರು
author img

By

Published : Sep 1, 2022, 12:40 PM IST

Updated : Sep 1, 2022, 1:25 PM IST

ಚಾಮರಾಜನಗರ: ಸ್ಮಶಾನಕ್ಕೆ ತೆರಳಲು ಸೇತುವೆ ಇಲ್ಲದಿರುವುದರಿಂದ ಮಹಿಳೆಯ ಶವವನ್ನು ಗ್ರಾಮ ಪಂಚಾಯತ್ ಕಚೇರಿ ಮುಂಭಾಗವೇ ಹೂತು ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಚಂದ್ರಮ್ಮ(48) ಎಂಬ ಮಹಿಳೆಯ ಶವವನ್ನು ಗ್ರಾಪಂ ಕಚೇರಿ ಮುಂಭಾಗವೇ ಹೂತುಹಾಕಿ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.

ಮಾಂಬಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳಲು ಕಾಲುವೆಯನ್ನು ದಾಟಿ ಹೋಗಬೇಕಿದ್ದು, ಸುವರ್ಣಾವತಿ ಜಲಾಶಯದ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಅಸಾಧ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಪಂ ಕಚೇರಿ ಮುಂದೆ ಶವ ಹೂತ ಗ್ರಾಮಸ್ಥರು

ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರಿಗೆ ಹತ್ತಾರು ವರ್ಷಗಳಿಂದ ಮನವಿ ಮಾಡುತ್ತ ಬಂದಿದ್ದರೂ ಸೇತುವೆ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಇಂದು ಗ್ರಾಪಂ ಕಚೇರಿ ಆವರಣದಲ್ಲೇ ಶವವನ್ನು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಸ್ಥಳಕ್ಕೆ ಎಸಿ ಗೀತಾ ಹುಡೇದ, ಡಿವೈಎಸ್ಪಿ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ : ಜೀವ ಭಯದಲ್ಲೇ ಹೆಗಲ ಮೇಲೆ ಶವ ಹೊತ್ತು ನದಿ ದಾಟಿದ ಗ್ರಾಮಸ್ಥರು: ವಿಡಿಯೋ

Last Updated : Sep 1, 2022, 1:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.