ETV Bharat / state

Video Viral: ಫಾರೆಸ್ಟ್ ಸಿಬ್ಬಂದಿ ಅಟ್ಟಾಡಿಸಿದ ಕಾಡಾನೆ - ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ - ಅರಣ್ಯ ಇಲಾಖೆ ಜೀಪ್ ಅಟ್ಟಾಡಿಸಿದ ಆನೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಟೈಗರ್ ರೋಡ್ ಎಂಬಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಪೊದೆ ಬಳಿ ನಿಂತಿದ್ದ ಕಾಡಾನೆಯೊಂದು ದಿಢೀರನೇ ಪ್ರತ್ಯಕ್ಷವಾಗಿ ಜೀಪ್​ ಅಟ್ಟಾಡಿಸಿಕೊಂಡು ಬಂದಿರುವ ವಿಡಿಯೋ ವೈರಲ್​ ಆಗಿದೆ.

ಫಾರೆಸ್ಟ್ ಸಿಬ್ಬಂದಿ ಜೀಪ್​ ಅಟ್ಟಾಡಿಸಿದ ಕಾಡಾನೆ
Video Viral
author img

By

Published : Mar 16, 2022, 11:57 AM IST

ಚಾಮರಾಜನಗರ: ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಕಾಡಾನೆಯೊಂದು ಅಟ್ಟಾಡಿಸಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಟೈಗರ್ ರೋಡ್ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.

ಎಂದಿನಂತೆ ನಾಲ್ವರು ಗಸ್ತು ತಿರುಗುತ್ತಿದ್ದಾಗ ಪೊದೆ ಬಳಿ ನಿಂತಿದ್ದ ಕಾಡಾನೆಯೊಂದು ದಿಢೀರ್​​​ ಪ್ರತ್ಯಕ್ಷವಾಗಿ ದಾಳಿ ಮಾಡಲು ಮುಂದಾಗಿದೆ‌. ಅರಣ್ಯ ಇಲಾಖೆ ವಾಹನ ಚಾಲಕ ಶ್ರೀಕಂಠ ಎಂಬುವರು ರಿವರ್ಸ್ ಗೇರಿನಲ್ಲೇ ಚಾಕಚಕ್ಯತೆಯಿಂದ ಜೀಪ್​ ಅನ್ನು ಚಲಾಯಿಸಿ ಆಗುತ್ತಿದ್ದ ಅನಾಹುತ ತಪ್ಪಿಸಿದ್ದಾರೆ.

ಫಾರೆಸ್ಟ್ ಸಿಬ್ಬಂದಿ ಜೀಪ್​ ಅಟ್ಟಾಡಿಸಿದ ಕಾಡಾನೆ

ಸಾಮಾನ್ಯವಾಗಿ ಈ ರೀತಿ ಘಟನೆಗಳು ಕಾಡಿನಲ್ಲಿ ನಡೆಯಲಿದ್ದು ಆತಂಕ, ಅಪಾಯದ ಭಯದಿಂದಾಗಿ ಆನೆಗಳು ಈ ರೀತಿ ಅಟ್ಟಾಡಿಸಿಕೊಂಡು ಬರುತ್ತವೆ. ಸಾಕಷ್ಟು ಬಾರಿ ಸಫಾರಿಗೆ ತೆರಳುವ ಪ್ರವಾಸಿಗರನ್ನು ಕಾಡಾನೆ ಅದರಲ್ಲೂ ಸಲಗ ಮತ್ತು ದಂತ ಮೂಡದ ಗಂಡಾನೆಗಳು ಈ ರೀತಿ ಅಟ್ಟಾಡಿಸುತ್ತವೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವನ್ಯಜೀವಿ ಹೋರಾಟಗಾರ ಜೋಸೆಫ್ ಹೂವರ್ ಸೇರಿದಂತೆ ಬಹಳಷ್ಟು ನೆಟ್ಟಿಗರು ಶ್ರೀಕಂಠ ಚಾಲನ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹೋಳಿ ರಜೆ ನಂತರ ಸುಪ್ರೀಂಕೋರ್ಟ್‌ನಲ್ಲಿ ಹಿಜಾಬ್‌ ಮೇಲ್ಮನವಿ ಅರ್ಜಿ ವಿಚಾರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.