ETV Bharat / state

ಮೂತ್ರ ವಿಸರ್ಜನೆಗೂ ಜಿಎಸ್​ಟಿ ಕಟ್ಟದಿದ್ದರೇ ಅರೆಸ್ಟ್: ವಾಟಾಳ್ ನಾಗರಾಜ್ - ಚಾಮರಾಜನಗರ

ಚಾಮರಾಜನಗರದಲ್ಲಿ ವಾಟಳ್​ ನಾಗರಾಜ್​ ದಿನಸಿ ಪದಾರ್ಥಗಳಿಗೆ ಜಿಎಸ್​ಟಿ ಹೇರಿರುವ ಕುರಿತು ಪ್ರತಿಭಟನೆ ಮಾಡಿದರು.

vatal
ವಾಟಾಳ್ ನಾಗರಾಜ್ ಟೀಕೆ
author img

By

Published : Jul 17, 2022, 7:21 PM IST

ಚಾಮರಾಜನಗರ: ದಿನಸಿ ಪದಾರ್ಥಗಳಿಗೂ ಜಿಎಸ್ಟಿ ಹೇರಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್,​ ಮೂತ್ರ ವಿಸರ್ಜನೆಗೂ ಇನ್ಮುಂದೆ ಜಿಎಸ್ಟಿ ಕಟ್ಟಿಬೇಕಾಗುತ್ತದೆ. ಎಷ್ಟು ಪ್ರಮಾಣದಲ್ಲಿ ಮೂತ್ರ ವಿಸರ್ಜನೆ ಮಾಡ್ತೇವೋ ಅಷ್ಟು ಟ್ಯಾಕ್ಸ್ ಕಟ್ಟಬೇಕು, ಕಟ್ಟದಿದ್ದರೇ ಪೊಲೀಸರು ಬಂಧಿಸಲಿದ್ದಾರೆ. ಇದನ್ನು ಅಶ್ಲೀಲವಾಗಿ ಹೇಳುತ್ತಿಲ್ಲ, ಪರಿಸ್ಥಿತಿ ಇಷ್ಟು ಗಂಭೀರವಾಗಿದೆ ಎಂದರು.

ಆಹಾರ ಪದಾರ್ಥಗಳ ಮೇಲೆ ಜಿಎಸ್ಟಿ ಹೇರಿರುವುದು ಸೂಕ್ತವಲ್ಲ, ಪ್ರಧಾನಿ ನರೇಂದ್ರ ಮೋದಿ ಅಧಿಕಾರದಿಂದ ಇಳಿದರೇ ದೇಶ ಸುಭಿಕ್ಷವಾಗಲಿದೆ. ಅವರು ಅಂಬಾನಿ-ಅದಾನಿ ಪರ, ಬಡವರ ಪರ ಎಂಬ ಮುಖವಾಡ ಧರಿಸಿದ್ದಾರೆ ಎಂದು ಆರೋಪಿಸಿದರು.

ಮೂತ್ರ ವಿಸರ್ಜನೆಗೂ ಜಿಎಸ್​ಟಿ ಕಟ್ಟದಿದ್ದರೇ ಅರೆಸ್ಟ್

ಇದಕ್ಕೂ ಮುನ್ನ ಚಾಮರಾಜೇಶ್ವರ ದೇಗುಲದ ಮುಂಭಾಗ ಛತ್ರಿ ಹಿಡಿದು ಪ್ರತಿಭಟಿಸಿದ ಅವರು, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುವುದನ್ನು ಬಿಟ್ಟು ಪ್ರಧಾನಿ ಕರ್ನಾಟಕಕ್ಕೆ ಬಂದು ನೆರೆ ಹಾನಿ ವೀಕ್ಷಿಸಿ ಪರಿಹಾರ ಘೋಷಿಸಬೇಕು‌. ಪ್ರಾಣಹಾನಿಯಾದ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂ.‌ ಪರಿಹಾರ ಘೋಷಿಸಬೇಕು‌ ಎಂದು ಒತ್ತಾಯಿಸಿದರು.

ಇದನ್ನೂ ಓದಿ : ವಿಚಾರಣೆ ನೆಪದಲ್ಲಿ ಸೋನಿಯಾ ಗಾಂಧಿಗೆ ಕಿರುಕುಳ: ಕೇಂದ್ರದ ಕ್ರಮ ಖಂಡಿಸಿ ಜು 21ರಂದು ರಾಜಭವನ ಮುತ್ತಿಗೆ- ಡಿಕೆಶಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.