ETV Bharat / state

ಬಿಎಸ್​ವೈ ಪರಭಾಷೆ ಏಜೆಂಟ್, ಡಿ.5ಕ್ಕೆ ಸಂಪೂರ್ಣ ಬಂದ್ ಶತಃಸಿದ್ಧ : ವಾಟಾಳ್ ನಾಗರಾಜ್‌ ಗುಡುಗು - Vatal Nagaraj barrage against BS Y in Chamarajanagar

ಮರಾಠ ನಿಗಮ ಮಾಡಿದ ಕೂಡಲೇ ಬೇರೆಲ್ಲರೂ ನಿಗಮ ರಚಿಸಬೇಕು ಎಂದು ಒತ್ತಾಯಿಸುತ್ತಿರಲು ಯಡಿಯೂರಪ್ಪ ಮಾಡಿರುವ ಅನಾಹುತವೇ ಕಾರಣ ಎಂದರು. ನಾಳೆ ಮಧ್ಯಾಹ್ನದ ತನಕ ನಿಗಮ ರದ್ದುಗೊಳಿಸಲು ಕನ್ನಡ ಒಕ್ಕೂಟ ಗಡುವು ನೀಡಿದ್ದವು‌. ಆದರೆ, ಸರ್ಕಾರದಿಂದ ಯಾವುದೇ ಸೂಚನೆ ಬಾರದಿರುವುದರಿಂದ ಸಮಗ್ರ ಕರ್ನಾಟಕ ಬಂದ್ ಆಗಲಿದೆ..

vatal-nagaraj
ವಾಟಾಳ್ ನಾಗರಾಜ್
author img

By

Published : Nov 29, 2020, 7:47 PM IST

ಚಾಮರಾಜನಗರ : ಬಂದ್​ಗೆ ಅವಕಾಶ ನೀಡುವುದಿಲ್ಲ ಎನ್ನಲು ಯಡಿಯೂರಪ್ಪ ಯಾರು? ಅವರು ಪರಭಾಷೆಯ ಏಜೆಂಟ್ ಆಗಿದ್ದಾರೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದ್ದಾರೆ.

ವಾಟಾಳ್ ನಾಗರಾಜ್ ಮಾತನಾಡಿದರು
ನಗರದಲ್ಲಿ ಇಂದು ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬೇರೆ ಯಾವ ಸಿಎಂ ಮಾಡದಿದ್ದನ್ನು ಯಡಿಯೂರಪ್ಪ ಮಾಡಿದ್ದು, ಕರ್ನಾಟಕದಲ್ಲಿ ಬೇರೆ ಭಾಷೆಯ ನಿಗಮ ರಚಿಸಿ ಅಪಾಯಕ್ಕೆ ಕಾರಣರಾಗಿದ್ದಾರೆ.
ಮರಾಠ ನಿಗಮ ಮಾಡಿದ ಕೂಡಲೇ ಬೇರೆಲ್ಲರೂ ನಿಗಮ ರಚಿಸಬೇಕು ಎಂದು ಒತ್ತಾಯಿಸುತ್ತಿರಲು ಯಡಿಯೂರಪ್ಪ ಮಾಡಿರುವ ಅನಾಹುತವೇ ಕಾರಣ ಎಂದರು. ನಾಳೆ ಮಧ್ಯಾಹ್ನದ ತನಕ ನಿಗಮ ರದ್ದುಗೊಳಿಸಲು ಕನ್ನಡ ಒಕ್ಕೂಟ ಗಡುವು ನೀಡಿದ್ದವು‌. ಆದರೆ, ಸರ್ಕಾರದಿಂದ ಯಾವುದೇ ಸೂಚನೆ ಬಾರದಿರುವುದರಿಂದ ಸಮಗ್ರ ಕರ್ನಾಟಕ ಬಂದ್ ಆಗಲಿದೆ. ಸಂಪೂರ್ಣ ಯಶಸ್ವಿಯಾಗಲಿದೆ. ಎಲ್ಲಾ ಅಂತರರಾಜ್ಯ ಗಡಿಗಳು, ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಲಿವೆ.
ವಕೀಲರ ಸಂಘ ಸೇರಿದಂತೆ 1050 ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ಕೊಟ್ಟಿವೆ‌. ಡಿ.5ರಂದು ಕುಡಿಯಲು ನೀರು ಸಿಗದ ರೀತಿ ರಾಜ್ಯ ಸ್ತಬ್ಧ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ವಿಜಯಪುರ ಬಂದ್ ಮಾಡಲಾಗಲ್ಲ ಎಂದು ಹೇಳಿರುವ ಯತ್ನಾಳ್-ಪತ್ನಾಳ್ ತನಗೆ ಗೊತ್ತಿಲ್ಲ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ವ್ಯಂಗ್ಯವಾಡಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.