ETV Bharat / state

ವಿಶ್ರೀ ನನ್ನ ಗುರುವಲ್ಲ, ಹಿರಿಯ ರಾಜಕಾರಣಿಯಷ್ಟೆ: ಸಂಸದ ಧ್ರುವನಾರಾಯಣ

ಪಕ್ಷ ಕಟ್ಟುವಾಗ ಜೊತೆಯಲ್ಲೇ ಓಡಾಡಿಕೊಂಡಿದ್ದ ರಾಜಕೀಯ ಮುಖಂಡರಿಬ್ಬರು ಇದೀಗ ಲೋಕಸಭಾ ಚುನಾವಣೆಯಲ್ಲಿ ಪರಸ್ಪರ ಸ್ಪರ್ಧಾಳುಗಳಾಗಿದ್ದಾರೆ. ಈ ಮೂಲಕ ಇಬ್ಬರೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಸದ ಧ್ರುವನಾರಾಯಣ
author img

By

Published : Mar 19, 2019, 5:59 PM IST

ಚಾಮರಾಜನಗರ: ವಿ. ಶ್ರೀನಿವಾಸಪ್ರಸಾದ್ ಮತ್ತು ನಾನು ಗುರು-ಶಿಷ್ಯರಲ್ಲ, ಅವರು ಹಿರಿಯ ರಾಜಕಾರಣಿಯಷ್ಟೇ ಎಂದು ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಸಂಸದ ಧ್ರುವನಾರಾಯಣ ಹೇಳಿದರು.

ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ನಾನು ಸಂತೆಮರಹಳ್ಳಿ ಶಾಸಕನಾಗಿದ್ದಾಗ ಅವರು ಜೆಡಿಎಸ್​ನಲ್ಲಿದ್ದರು. ದಿವಗಂತ ರಾಜಶೇಖರ ಮೂರ್ತಿ ಅವರು ನನಗೆ ರಾಜಕೀಯ ಗುರು ಎಂದು ಧ್ರುವನಾರಾಯಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ಸಂಸದ ಧ್ರುವನಾರಾಯಣ

ನಾನು ಕಾಂಗ್ರೆಸ್​ನಲ್ಲಿದ್ದಾಗ ಶ್ರೀನಿವಾಸ್ ಪ್ರಸಾದ್, ಮಹದೇವ ಪ್ರಸಾದ್ ಅವರು ಜೆಡಿಎಸ್​ನಲ್ಲಿದ್ದರು. ನಂತರ ಅವರೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಬಂದರು. ಹಿರಿಯರು ಅಂತ ನಮ್ಮ ಪಕ್ಷ ಸೇರಿದ ಮೇಲೆ ಗೌರವದಿಂದ ಕಾಣುತ್ತಿದ್ದೆವು. ಅವರು ಕಾಂಗ್ರೆಸ್ ಬಿಟ್ಟು ಹೋಗುವಾಗ ಕೊನೆವರೆಗೂ ನಾನು ಅವರ ಜೊತೆಯಲ್ಲೇ ಇದ್ದವನು. ಈಗ ಪರಸ್ಪರ ಸ್ಪರ್ಧಿಗಳಿದ್ದೇವೆ ಎಂದರು.

ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ, ಯಾರೇ ಸ್ಪರ್ಧೆ ಮಾಡಿದರೂ ಗೆಲುವು ನಮ್ಮದೇ ಎಂದು ಧ್ರುವನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು‌‌.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.