ETV Bharat / state

ಕೊನೆಗೂ ಗಡಿ ಜಿಲ್ಲೆಯಲ್ಲಿ ಕಮಲ ಅರಳಿಸಿದ ಹಳೇ ಹುಲಿ... ಕೈ ಕೋಟೆ ಛಿದ್ರ! - undefined

ಚಾಮರಾಜನಗರ ಲೋಕಸಭಾ ಕ್ಷೇತ್ರ ಈ ಹಿಂದೆಂದಿಗಿಂತಲೂ ಜಿದ್ದಾಜಿದ್ದಿನಿಂದ ಕೂಡಿತ್ತು. ಸಿದ್ದರಾಮಯ್ಯ, ಪುಟ್ಟರಂಗಶೆಟ್ಟಿ ಬಿರುಸಿನ ಪ್ರಚಾರದ ನಡುವೆಯೂ ಬಿಜೆಪಿ ಪಾಳಯದ ಕೈ ಮೇಲಾಗುವ ಮೂಲಕ ಕೇಸರಿ ಬಾವುಟ ಹಾರಾಡಿದೆ.

ಗಡಿಜಿಲ್ಲೆಯಲ್ಲಿ ಕಮಲ ಅರಳಿಸಿದ ಹಳೇ ಹುಲಿ
author img

By

Published : May 23, 2019, 7:51 PM IST

ಚಾಮರಾಜನಗರ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕೊನೆಗೂ ವಿ. ಶ್ರೀನಿವಾಸಪ್ರಸಾದ್ ಗೆಲ್ಲುವ ಮೂಲಕ ಗಡಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿದೆ. ಈ ಮೂಲಕ, ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ ಹ್ಯಾಟ್ರಿಕ್ ಜಯದ ಕನಸು ಕನಸಾಗೇ ಉಳಿಯಿತು.

ಗಡಿ ಜಿಲ್ಲೆಯಲ್ಲಿ ಪ್ರಸಾದ್ ಪಾರುಪತ್ಯ...

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಸಂಸದ ಆರ್.ಧ್ರುವನಾರಾಯಣ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ನಡೆಸಿ ಹ್ಯಾಟ್ರಿಕ್​ ಜಯದ ವಿಶ್ವಾಸದಲ್ಲಿದ್ದರು. ಆದರೆ, ಹಿರಿಯ ರಾಜಕಾರಣಿಯಾದ ವಿ.ಶ್ರೀನಿವಾಸ್​ ಪ್ರಸಾದ್​ ಪಟ್ಟುಗಳು ಕಾಂಗ್ರೆಸ್ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ.

ಗಡಿ ಜಿಲ್ಲೆಯಲ್ಲಿ ಕಮಲ ಅರಳಿಸಿದ ಹಳೇ ಹುಲಿ

ಮೋದಿ ಅಲೆಯಲ್ಲಿ ಜಯದ ನಗೆ ... ವರ್ಕೌಟ್​ ಆಯ್ತಾ ಬಿಎಸ್​​ವೈ ವರ್ಚಸ್ಸು...

ಕಳೆದ ಬಾರಿಗಿಂತ ಈ ಬಾರಿ ಜಿಲ್ಲೆಯಲ್ಲಿ ಮೋದಿ ಅಲೆ ಕೆಲಸ ಮಾಡಿದೆ. ಜೊತೆಗೆ ಬಿ.ಎಸ್.ಯಡಿಯೂರಪ್ಪ ವರ್ಚಸ್ಸು ಹಾಗೂ ವಿ.ಶ್ರೀನಿವಾಸಪ್ರಸಾದ್ ಮೇಲಿನ ಸಿಂಪಥಿ ವರ್ಕೌಟ್ ಆಗಿದ್ದು, ಧ್ರುವನಾರಾಯಣರನ್ನು ಸೋಲಿಸುವ ಮೂಲಕ ಪ್ರಸಾದ್ ತಮ್ಮ ಪ್ರತಿಷ್ಠೆ ಉಳಿಸಿಕೊಂಡಿದ್ದಾರೆ.

ಕಾಂಗ್ರೆಸ್​ ಕೋಟೆ ಛಿದ್ರ ಛಿದ್ರ...

ಇಲ್ಲಿಯವರೆಗೂ ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕೇಸರಿ ಬಾವುಟ ಹಾರಿಸಿದ್ದು, ಮೋದಿ ಸಂಪುಟದಲ್ಲಿ ಪ್ರಸಾದ್ ಸಚಿವರಾಗಲಿದ್ದಾರೆ ಎಂಬ ವಿಶ್ವಾಸ ಬಿಜೆಪಿ ಕಾರ್ಯಕರ್ತರದ್ದಾಗಿದೆ. ಜೆಡಿಯು ಹಾಗೂ ಕಾಂಗ್ರೆಸ್​ನಿಂದ 5 ಬಾರಿ ಆಯ್ಕೆಯಾಗಿದ್ದ ಪ್ರಸಾದ್ ಈಗ 6ನೇ ಬಾರಿ ಸಂಸತ್ ಪ್ರವೇಶಿಸುತ್ತಿದ್ದಾರೆ. 1999ರಲ್ಲಿ ಅಟಲ್ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಪ್ರಸಾದ್​ 2 ದಶಕದ ಬಳಿಕ ಮತ್ತೆ ಕೇಂದ್ರ ಸಚಿವರಾಗುವರೇ ಎಂಬುದನ್ನು ಕಾದು ನೋಡಬೇಕಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.