ಕೊಳ್ಳೇಗಾಲ: ಕ್ರೇಂದ್ರದ ಯುಪಿಎಸ್ಸಿ ಪೂರಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಇದರಿಂದ ಕನ್ನಡ ಮಾಧ್ಯಮದಲ್ಲಿ ಓದುವ, ಬರೆಯುವ ಮಕ್ಕಳಿಗೆ ತೊಂದರೆಯಾಗಿದೆ. ಮುಂದಿನ ವರ್ಷದಿಂದ ಕನ್ನಡದಲ್ಲೇ ಪ್ರಶ್ನೆ ಪತ್ರಿಕೆ ನೀಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಶಾಸಕ ಎನ್ ಮಹೇಶ್ ಒತ್ತಾಯಿಸಿದ್ದಾರೆ.
ಶಾಸಕ ನರೇಂದ್ರ ಮಾತನಾಡಿ, ಕನ್ನಡ ನಾಡು, ಜಲ, ನೆಲ, ಭಾಷೆಗಳಿಗೆ ಹೋರಾಡಿದವರ ಸ್ಮರಣೆಯನ್ನು ನಾವು ಸದಾ ಮಾಡಬೇಕು. ನಮಗೆ ಅನ್ನ ನೀಡುವ ಭಾಷೆ ಕನ್ನಡ ಮಾತ್ರ, ಆದ್ದರಿಂದ ನಮ್ಮ ಮಾತೃ ಭಾಷೆಯ ಮೇಲೆ ಹೆಚ್ಚಿನ ಅಭಿಮಾನ ಇಡಬೇಕು ಎಂದರು.
ಇದಕ್ಕೂ ಮುನ್ನ ಉಪವಿಭಾಗಧಿಕಾರಿ ಗಿರೀಶ್ ದಿಲೀಪ್ ಬದೋಲೆ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ದಂಡಾಧಿಕಾರಿ ಕುನಾಲ್ ನಾಡ ಧ್ವಜಾರೋಹಣ ಮಾಡಿದ್ದು, ನಂತರ ಕನ್ನಡ ಭಾಷೆಯ ಇತಿಹಾಸದ ಸಂದೇಶವನ್ನು ತಿಳಿಸಲಾಯಿತು.