ಚಾಮರಾಜನಗರ: ದಲಿತ ಯುವಕನನ್ನು ಬೆತ್ತಲೆಗೊಳಿಸಿ ಥಳಿಸಿರುವ ಪ್ರಕರಣ ಸಂಬಂಧ ಇಬ್ಬರು ಪೊಲೀಸರ ತಲೆದಂಡವಾಗಿದೆ.
ದಲಿತ ಯುವಕ ಪ್ರತಾಪ್ ಎಂಬಾತನನ್ನು ಥಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ, ಜೂ.3 ರಂದು ಕರ್ತವ್ಯದಲ್ಲಿದ್ದ ಎಎಸ್ಐ ರಾಜೇಂದ್ರ ಪ್ರಸಾದ್ ಹಾಗೂ ಚಾಲಕ ಶ್ರೀನಿವಾಸ್ ಎಂಬವರನ್ನು ಅಮಾನತುಗೊಳಿಸಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಆದೇಶ ಹೊರಡಿಸಿದ್ದಾರೆ.
ಅಮಾನತಿಗೆ ಕಾರಣ:
ಘಟನೆಯ ಕುರಿತು ಈ ಇಬ್ಬರು ಪೊಲೀಸರು ಕರ್ತವ್ಯ ನಿರ್ವಹಿಸದಿರುವುದು ಹಾಗೂ ಥಳಿತಕ್ಕೊಳಾಗಾದವನಿಗೆ ಬಟ್ಟೆ ವ್ಯವಸ್ಥೆ ಮಾಡದಿದ್ದದ್ದು, ಕರ್ತವ್ಯದಲ್ಲಿ ದುರ್ನಡತೆ, ಅಶಿಸ್ತು ಪ್ರದರ್ಶನದ ಕಾರಣ ನೀಡಿ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ.