ETV Bharat / state

ಕೊರೊನಾ ಭೀತಿಯಿಂದ ಸಾರಿಗೆ ಸಂಪರ್ಕ ಸ್ಥಗಿತ: 3 ರಾಜ್ಯದ ಸಂಪರ್ಕ ಸಂಪೂರ್ಣ ಕಡಿತ - ಮೂರು ರಾಜ್ಯದ ಸಂಪರ್ಕ ಸಂಪೂರ್ಣ ಕಡಿತ

ಗುಂಡ್ಲುಪೇಟೆ ತಾಲೂಕು ಕೇರಳ ಮತ್ತು ತಮಿಳುನಾಡಿನ ಸಂಪರ್ಕ ಕೊಂಡಿಯಾಗಿದ್ದು, ಇಲ್ಲಿನ ಅನೇಕರು ಎರಡು ರಾಜ್ಯದ ನಡುವೆ ಸಂಬಂಧ ಉಳಿಸಿಕೊಂಡಿದ್ದಾರೆ.

Transportation breakdown due to corona fea
ಕೊರೊನಾ ಭೀತಿಯಿಂದ ಸಾರಿಗೆ ಸಂಪರ್ಕ ಸ್ಥಗಿತ
author img

By

Published : Mar 22, 2020, 12:34 PM IST

ಗುಂಡ್ಲುಪೇಟೆ: ಕೊರೊನಾ ವೈರಸ್​​ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸಾರಿಗೆ ವ್ಯವಸ್ಥೆಯನ್ನು ಬಂದ್ ಮಾಡಿರುವುದರಿಂದ, ಮೂರು ರಾಜ್ಯದ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಗುಂಡ್ಲುಪೇಟೆ ತಾಲೂಕು ಕೇರಳ ಮತ್ತು ತಮಿಳುನಾಡಿನ ಸಂಪರ್ಕದ ಕೊಂಡಿಯಾಗಿದ್ದು, ಇಲ್ಲಿನ ಅನೇಕರು ಎರಡು ರಾಜ್ಯದ ನಡುವೆ ಸಂಬಂಧ ಉಳಿಸಿಕೊಂಡಿದ್ದಾರೆ.

ಕೊರೊನಾ ಭೀತಿಯಿಂದ ಸಾರಿಗೆ ಸಂಪರ್ಕ ಸ್ಥಗಿತ

ರಾಜ್ಯದ ಸಾರಿಗೆ ಬಸ್​​ಗಳು ಹೊರ ರಾಜ್ಯಗಳಿಗೆ ಹೋಗುವುದಕ್ಕೆ, ಅಲ್ಲಿನ ಸರ್ಕಾರ ನಿರ್ಬಂಧ ಹೇರಿರುವುದರಿಂದ ಜನಸಾಮಾನ್ಯರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ದಿನ ನಿತ್ಯ ಕೂಲಿ ಹಾಗೂ ವ್ಯಾಪಾರಕ್ಕಾಗಿ ಗೂಡಲೂರು, ಕೇರಳದ ವಯನಾಡ್, ಬತ್ತೆರಿ ನಗರಗಳನ್ನು ಆಶ್ರಯಿಸಿದ್ದಾರೆ. ಸಾರಿಗೆಗೆ ನಿರ್ಬಂಧ ಹೇರಿರುವುದರಿಂದ ದಿನ ಕೂಲಿಕಾರರಿಗೆ ತೊಂದರೆಯಾಗಿದೆ. ಕಾವೇರಿ ನೀರಿನ ಸಮಸ್ಯೆ ಬಂದಾಗಲೂ ಸಹ, ಹೊರ ರಾಜ್ಯಗಳಿಗೆ ಸಾರಿಗೆ ಬಂದ್ ಆಗುತ್ತಿತ್ತು. ಆದರೆ ಸಂಪರ್ಕ ಸಾಧಿಸಬಹುದಿತ್ತು ಎಂದು ಹೇಳ್ತಿದ್ದಾರೆ ವ್ಯಾಪಾರಸ್ಥರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.