ಚಾಮರಾಜನಗರ: ರಾತ್ರಿ ಸಂಚಾರ ನಿರ್ಬಂಧದಿಂದಾಗಿ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ದಿಂಬಂ ಘಟ್ಟ ಪ್ರದೇಶದಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಈ ಟ್ರಾಫಿಕ್ನಲ್ಲಿ ಸಿಲುಕಿದ್ದ ಮದುಮಗ 2 ಕಿಮೀ ನಷ್ಟು ದೂರ ನಡೆದುಕೊಂಡು ಹೋಗಿ ಹಸೆಮಣೆ ಏರಿದ ಪ್ರಸಂಗ ನಡೆದಿದೆ.
ಹೌದು, ಬಣ್ಣಾರಿ ದೇಗುಲದಲ್ಲಿ ಮದುವೆ ಮುಹೂರ್ತ ನಿಗದಿಯಾಗಿತ್ತು. ಆದ್ರೆ ಟ್ರಾಫಿಕ್ ಉಂಟಾಗಿದ್ದರಿಂದ ಮದುಮಗ ನಡೆದುಕೊಂಡೇ ದೇಗುಲಕ್ಕೆ ತೆರಳಿ ನಿಗದಿತ ಮುಹೂರ್ತದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಗಂಡು ತನ್ನ ಕುಟುಂಬದವರೊಟ್ಟಿಗೆ ನಡೆದುಕೊಂಡು ಹೋಗುವ ವಿಡಿಯೋವನ್ನು ಲಾರಿ ಚಾಲಕರೊಬ್ಬರು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ದಿಂಬಂ ಮತ್ತು ಬಣ್ಣಾರಿ ರಸ್ತೆಯಲ್ಲಿ ಗುರುವಾರದಿಂದ ರಾತ್ರಿ ಸಂಚಾರ ಆರಂಭವಾಗಿದೆ. ನೂರಾರು ಲಾರಿ, ಗೂಡ್ಸ್ ವಾಹನಗಳು ಒಂದೇ ಬಾರಿಗೆ ಇಂದು ಬೆಳಗ್ಗೆ ಸಂಚಾರ ಆರಂಭಿಸಿದ್ದರಿಂದ ಎರಡು ತಾಸು ವಾಹನಗಳು ನಿಂತಲ್ಲೇ ನಿಂತಿವೆ. ಗಂಟೆ 9 ಆದರೂ ಸುಗಮ ಸಂಚಾರ ಇನ್ನೂ ಆರಂಭವಾಗಿಲ್ಲ ಎಂದು ಲಾರಿ ಚಾಲಕ ನಾಗೇಂದ್ರ ಎಂಬವರು ಮಾಹಿತಿ ಹಂಚಿಕೊಂಡಿದ್ದಾರೆ.
(ಇದನ್ನೂ ಓದಿ: Watch Video: ಸೇತುವೆಯಿಂದ ಜಿಗಿದ ವ್ಯಕ್ತಿಯ ಜೀವ ರಕ್ಷಿಸಿದ ಭಾರತೀಯ ನೌಕಾಪಡೆ)