ETV Bharat / state

ಗೋಪಿನಾಥಂ ಸಫಾರಿಯಲ್ಲಿ ಪಕ್ಷಿ ವೀಕ್ಷಣೆ, ಟ್ರಕ್ಕಿಂಗ್​​.. ಅರಣ್ಯ ಇಲಾಖೆಯ ಹೊಸ ಹೆಜ್ಜೆ

author img

By

Published : Mar 30, 2021, 6:00 PM IST

Updated : Mar 30, 2021, 6:51 PM IST

ಇದು ಅಂದಾಜು ಗೋಪಿನಾಥಂನಿಂದ 6 ಕಿ.ಮೀ‌ ದೂರವಾಗಲಿದೆ.‌ ಅಲ್ಲಿ ಸ್ಮಾರಕ ಹಾಗೂ ಉದ್ಯಾನವನ್ನು ತೋರಿಸಲಾಗುವುದು. ಪ್ರಾಣಿಗಳಿಗಿಂತ ಹೆಚ್ಚಾಗಿ ಬರ್ಡ್ಸ್ ಸೈಟಿಂಗ್‌ಗೆ ಹೆಚ್ಚು ಒತ್ತು ನೀಡಲಾಗಿದೆ.‌ಬರ್ಡ್ ಸೈಟಿಂಗ್​​ಗೆ ಬೆಳಗ್ಗೆ ಅವಕಾಶ ಕೊಡಲಿದ್ದು, ನಾಗಮಲೆ, ಮೇಲ್ಮಲೆಗೆ ಟ್ರಕ್ಕಿಂಗ್, ಗಿಡಮೂಲಿಕೆ ಸಸ್ಯಗಳ ಬಗ್ಗೆ ಅರಿವು ಮೂಡಿಸಲಾಗುವುದು.‌.

tourism-department-started-tracking-in-gopinatham-safari-area
ಪ್ರವಾಸೋದ್ಯಮ ಇಲಾಖೆಯ ಹೊಸ ಹೆಜ್ಜೆ

ಚಾಮರಾಜನಗರ : ಈ ಸಾಲಿನ‌ ಬಜೆಟ್​​​​ನಲ್ಲಿ‌ ಸಿಎಂ ಬಿಎಸ್​​​ವೈ ಘೋಷಿಸಿದ ಹನೂರು ತಾಲೂಕಿನ‌ ಗೋಪಿನಾಥಂನಲ್ಲಿ ವನ್ಯಜೀವಿ ಸಫಾರಿ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಬರ್ಡ್ ವಾಚಿಂಗ್, ಟ್ರಕ್ಕಿಂಗ್​​​ಗೆ ಪ್ಲಾನ್ ಮಾಡಿಕೊಂಡಿದೆ.

ವನ್ಯಜೀವಿ ಸಫಾರಿಯಲ್ಲಿ ಗೋಪಿನಾಥಂ ಕೆರೆ ಸುತ್ತಮುತ್ತಲೂ ಪಕ್ಷಿಗಳ ವೀಕ್ಷಣೆಗೆ ಹೆಚ್ಚು ಒತ್ತು ಕೊಟ್ಟಿದ್ದು, ಸಫಾರಿ ಎಂದ ಕೂಡಲೇ ಹುಲಿ, ಚಿರತೆಯಷ್ಟೇ ಅಲ್ಲ ಪ್ರಾಕೃತಿಕ ಸೌಂದರ್ಯ, ಪಕ್ಷಿಗಳ ವೀಕ್ಷಣೆಯೂ ಹೌದು ಎಂಬಂತಹ ಮತ್ತೊಂದು ಆಯಾಮ‌ ನೀಡಲು ಮುಂದಾಗಿದ್ದಾರೆ.

ಗೋಪಿನಾಥಂ ಸಫಾರಿಯಲ್ಲಿ ಪಕ್ಷಿ ವೀಕ್ಷಣೆ, ಟ್ರಕ್ಕಿಂಗ್​.​.

ಈ ಕುರಿತು ಚಾಮರಾಜನಗರ ಸಿಸಿಎಫ್ ಮನೋಜ್ ಕುಮಾರ್ ಮಾತನಾಡಿ, ಬಜೆಟ್​ನಲ್ಲಿ 5 ಕೋಟಿ ರೂ.‌ ಅನುದಾನ ಘೋಷಿಸಲಾಗಿದೆ. ಹೊಗೆನಕಲ್ ಜಲಪಾತದ ಸಮೀಪ‌‌‌‌‌ ಶೌಚಾಲಯ, ಕುಡಿಯುವ ನೀರಿನ‌ ವ್ಯವಸ್ಥೆ, ಕ್ಯಾಂಟೀನ್, ಪ್ರವಾಸಿಗರು ವಿಶ್ರಮಿಸಲು ಅವಕಾಶ‌ ಕಲ್ಪಿಸಲು ರೂಪುರೇಷೆ ಸಿದ್ಧವಾಗಿದೆ. ಜೊತೆಗೆ ಕಾಡುಗಳ್ಳ ವೀರಪ್ಪನ್​​​ ಕ್ರೌರ್ಯಕ್ಕೆ ಬಲಿಯಾದ ಪಿ.ಶ್ರೀನಿವಾಸ್ ಅವರ ಸ್ಮಾರಕ ಸ್ಥಳವನ್ನು ಪ್ರವಾಸಿಗರಿಗೆ ಪರಿಚಯಿಸಲಾಗುವುದು ಎಂದರು.

ಕಾವೇರಿ ವನ್ಯಜೀವಿಧಾಮದ ಡಿಸಿಎಫ್ ರಮೇಶ್ ಮಾತನಾಡಿ, ಗೋಪಿನಾಥಂ ಸಫಾರಿಯಲ್ಲಿ ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ಅವರ ಸ್ಮಾರಕವನ್ನು ವೀಕ್ಷಣೆಗೆ ಮುಕ್ತ ಮಾಡಲಾಗಿದೆ. ಬಲಿದಾನ, ಅರಣ್ಯ ರಕ್ಷಣೆ ಬಗ್ಗೆ, ಪ್ರವಾಸಿಗರಿಗೆ ಜಾಗೃತಿ ಮೂಡಿಸಲಾಗುವುದು. ಇದು ಅಂದಾಜು ಗೋಪಿನಾಥಂನಿಂದ 6 ಕಿ.ಮೀ‌ ದೂರವಾಗಲಿದೆ.‌ ಅಲ್ಲಿ ಸ್ಮಾರಕ ಹಾಗೂ ಉದ್ಯಾನವನ್ನು ತೋರಿಸಲಾಗುವುದು. ಪ್ರಾಣಿಗಳಿಗಿಂತ ಹೆಚ್ಚಾಗಿ ಬರ್ಡ್ಸ್ ಸೈಟಿಂಗ್‌ಗೆ ಹೆಚ್ಚು ಒತ್ತು ನೀಡಲಾಗಿದೆ.‌

ಬರ್ಡ್ ಸೈಟಿಂಗ್​​ಗೆ ಬೆಳಗ್ಗೆ ಅವಕಾಶ ಕೊಡಲಿದ್ದು, ನಾಗಮಲೆ, ಮೇಲ್ಮಲೆಗೆ ಟ್ರಕ್ಕಿಂಗ್, ಗಿಡಮೂಲಿಕೆ ಸಸ್ಯಗಳ ಬಗ್ಗೆ ಅರಿವು ಮೂಡಿಸಲಾಗುವುದು.‌ ಸಣ್ಣ ಟ್ರಯಲ್ ಬೇಕೆಂದವರಿಗೆ‌ ಗೋಪಿನಾಥಂ ಕೆರೆಯಲ್ಲಿ ಪಕ್ಷಿ ವೀಕ್ಷಣೆ ಮಾಡಬಹುದು. ದೊಡ್ಡ ಟ್ರಯಲ್ ಬೇಕೆಂದವರು ಟ್ರಕ್ಕಿಂಗ್​​​ಗೆ ಹೋಗಬಹುದು, ಸ್ಮಾರಕ ವೀಕ್ಷಿಸಬಹುದು ಎಂದು ತಿಳಿಸಿದರು.

ಇದನ್ನೂ ಓದಿ: ತುಮಕೂರಿನಲ್ಲಿ ಹದಗೆಟ್ಟಿವೆ ಅದೆಷ್ಟೋ ರಸ್ತೆಗಳು: ಹೆಸರಿಗಷ್ಟೇನಾ ಸ್ಮಾರ್ಟ್ ಸಿಟಿ?

Last Updated : Mar 30, 2021, 6:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.