ಚಾಮರಾಜನಗರ: ಅಕ್ಕಪಕ್ಕದ ಗ್ರಾಮಸ್ಥರ ಬಳಿ ಟೋಲ್ ವಸೂಲಿ ಮಾಡುತ್ತಿದ್ದರಿಂದ, ರೊಚ್ಚಿಗೆದ್ದ ಸ್ಥಳೀಯರು ಪ್ರತಿಭಟಿಸಿರುವ ಘಟನೆ ಗುಂಡ್ಲುಪೇಟೆ-ಕೇರಳ ರಾಷ್ಟ್ರೀಯ ಹೆದ್ದಾರಿಯ ಕನ್ನೇಗಾಲ ಟೋಲ್ಗೇಟ್ ನಲ್ಲಿ ನಡೆದಿದೆ.
ಓದಿ: ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿವಾದ ; ಸಹೋದರಿಯರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ!
ಕನ್ನೇಗಾಲ ಟೋಲ್ಗೇಟ್ಗೆ ಹೊಂದಿಕೊಂಡಂತೆ ಇರುವ ಭೀಮನ ಬೀಡು ಸೇರಿದಂತೆ 3-4 ಗ್ರಾಮಗಳ ಜನರ ಬಳಿಯಿಂದಲೂ ಟೋಲ್ ವಸೂಲಾತಿ ಮಾಡುತ್ತಿದ್ದರು. ಗಡಿನಾಡು ರಕ್ಷಣಾ ಸಮಿತಿ, ಭೀಮನಬೀಡು ಗ್ರಾಪಂ ಅಧ್ಯಕ್ಷ ಶಿವಕುಮಾರ್ ಮತ್ತಿತರರು ಇಂದು ಟೋಲ್ ಕೇಂದ್ರಕ್ಕೆ ಮುತ್ತಿಗೆ ಹಾಕಿ ಸ್ಥಳೀಯರಿಂದ ಸುಂಕ ವಸೂಲಾತಿ ಮಾಡಬಾರದು ಎಂದು ಆಗ್ರಹಿಸಿದರು.
ಟೋಲ್ ಸಿಬ್ಬಂದಿ ಹಾಗೂ ಸ್ಥಳೀಯರ ಮಾತಿನ ಚಕಮಕಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗುಂಡ್ಲುಪೇಟೆ ಪೊಲೀಸರು ತಾತ್ಕಾಲಿಕವಾಗಿ ಸ್ಥಳೀಯರಿಂದ ಶುಲ್ಕ ವಸೂಲಾತಿಯನ್ನು ನಿಲ್ಲಿಸಿದರು. ಟೋಲ್ ಮೇಲಾಧಿಕಾರಿ ಬಂದ ಬಳಿಕ ಸ್ಥಳೀಯರು ಮತ್ತು ಅವರು ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಲಿ ಎಂದು ಪ್ರತಿಭಟನಾಕಾರರ ಮನವೊಲಿಸಿದರು.