ಚಾಮರಾಜನಗರ : ಟಿಂಬರ್ ತುಂಬಿದ ಲಾರಿಯೊಂದು ಪಲ್ಟಿಯಾದ ಹಿನ್ನೆಲೆ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರೋಬ್ಬರಿ 6 ತಾಸು ಟ್ರಾಫಿಕ್ ಜಾಮ್ ಉಂಟಾಗಿರುವ ಘಟನೆ ನಡೆದಿದೆ.
ಮೈಸೂರಿನಿಂದ ತಮಿಳುನಾಡಿಗೆ ಟಿಂಬರ್ ತುಂಬಿಕೊಂಡು ತೆರಳುವಾಗ ದಿಂಬಂ ಘಟ್ಟ ಪ್ರದೇಶದ 6ನೇ ತಿರುವಿನಲ್ಲಿ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದ್ದರಿಂದ ಸರಕು ತುಂಬಿದ ವಾಹನಗಳು ಸೇರಿದಂತೆ ಸಾರಿಗೆ ಸಂಸ್ಥೆ ಬಸ್ಗಳು, ಕಾರುಗಳು ಮುಂದಕ್ಕೂ ಚಲಿಸಲಾಗದೇ ಹಿಂದಕ್ಕೂ ತೆರಳಲಾಗದೆ ಟ್ರಾಫಿಕ್ ಕಿರಿಕಿರಿ ಅನುಭವಿಸಿದ್ದಾರೆ.
ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆವರೆಗೆ ಬರೋಬ್ಬರಿ 6 ತಾಸು ನಿಂತಲ್ಲೇ ನಿಂತು ಪ್ರಯಾಣಿಕರು, ಚಾಲಕರು ಹೈರಾಣಾಗಿದ್ದಾರೆ. ಸದ್ಯ ಸತ್ಯಮಂಗಲಂ ಪೊಲೀಸರು ಪಲ್ಟಿಯಾಗಿದ್ದ ಲಾರಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಜಾಗರೂಕತೆಯಿಂದ ಚಾಲನೆ ಮಾಡಿದ್ದಕ್ಕೆ ಲಾರಿ ಚಾಲಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಓದಿ: ಜನ ಮೈಮರೆತರೆ ಲಾಕ್ಡೌನ್ ಅನಿವಾರ್ಯವಾಗಬಹುದು : ಆರಗ ಜ್ಞಾನೇಂದ್ರ ಎಚ್ಚರಿಕೆ