ETV Bharat / state

ಚಾಮರಾಜನಗರ: ತೀವ್ರ ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿದ್ದ ಹುಲಿ ಸಾವು - tiger died

ಕಾದಾಟದಲ್ಲಿ ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಹುಲಿ ಮೃತಪಟ್ಟ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ನಿತ್ರಾಣ ಸ್ಥಿತಿಯಲ್ಲಿ ಹುಲಿ ಪತ್ತೆ
ನಿತ್ರಾಣ ಸ್ಥಿತಿಯಲ್ಲಿ ಹುಲಿ ಪತ್ತೆ
author img

By ETV Bharat Karnataka Team

Published : Nov 24, 2023, 4:33 PM IST

Updated : Nov 24, 2023, 5:23 PM IST

ಚಾಮರಾಜನಗರ: ಸರಹದ್ದಿನ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡು ಮೇಲಕ್ಕೆ ಏಳಲಾರದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಹುಲಿ ಮೃತಪಟ್ಟಿದೆ. ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿ ಸಮೀಪ ಶುಕ್ರವಾರ ಬೆಳಗ್ಗೆ ಗಾಯಗೊಂಡ ಹುಲಿ ಕಂಡುಬಂದಿತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯ ವ್ಯಾಪ್ತಿಯ ಜನವಸತಿ ಸಮೀಪವೇ ಹುಲಿ ತೀರಾ ನಿತ್ರಾಣ ಸ್ಥಿತಿಯಲ್ಲಿತ್ತು.

ಈ ಬಗ್ಗೆ ಮಾಹಿತಿ ನೀಡಿದ್ದ ಬಂಡೀಪುರ ಸಿಎಫ್ಒ ರಮೇಶ್ ಕುಮಾರ್, ಹುಲಿಗೆ 3 ವರ್ಷಗಳಾಗಿರಬಹುದು ಎಂದು ಅಂದಾಜು ಮಾಡಲಾಗಿದ್ದು, ಮತ್ತೊಂದು ಗಂಡು ಹುಲಿ ಜೊತೆಗಿನ ಸರಹದ್ದಿನ ಕಾದಾಟದಲ್ಲಿ ಗಾಯಗೊಂಡಿದೆ. ಹುಲಿ ಈಗಾಗಲೇ ನಿತ್ರಾಣಗೊಂಡಿರುವುದರಿಂದ ಚುಚ್ಚುಮದ್ದು ಕೊಟ್ಟು ಸೆರೆ ಹಿಡಿಯಲಾಗಲ್ಲ, ಬೋನಿನ ಮೂಲಕ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರು. ಆದರೆ ಅರಣ್ಯ ಇಲಾಖೆಯ ಕಾರ್ಯಾಚರಣೆಗೂ ಮುನ್ನವೇ ಹುಲಿ ಅಸುನೀಗಿದೆ.

ಏನಿದು ಸರಹದ್ದಿನ ಕದನ: ಗಂಡು ಹುಲಿಗಳು ಸಾಮಾನ್ಯವಾಗಿ ಅರಣ್ಯ ಪ್ರದೇಶದಲ್ಲಿ ಇಂತಿಷ್ಟು ಸ್ಥಳವೆಂದು ಗುರುತಿಸಿಕೊಂಡು ವಾಸ ಮಾಡುತ್ತವೆ. ಹೆಣ್ಣು ಹುಲಿಗಳ‌ ಸಖ್ಯ ದೊರೆತಾಗ ಮಾತ್ರ ಕೆಲ‌ ತಿಂಗಳು ಒಟ್ಟಿಗೆ ಇರಲಿವೆ. ಇನ್ನು, ಮರಿಗಳು ಕಾಪಾಡುವ ಹೊತ್ತಿನಲ್ಲಿ ತಾಯಿ ಹುಲಿ ಒಟ್ಟಿಗೆ ತನ್ನ ಮರಿಗಳ ಜೊತೆ ಇರುವುದು ಬಿಟ್ಟರೆ ತಾನು ಗುರುತಿಸಿಕೊಂಡ ಪ್ರದೇಶದಲ್ಲಿ ಹುಲಿ ಒಂಟಿಯಾಗಿ ಇರಲಿದೆ.

ಒಂದು ಪ್ರದೇಶಕ್ಕೆ ಮತ್ತೊಂದು ಹುಲಿ ಬಂದಾಗ ಇಲ್ಲವೇ ಹೊಸ ಸರಹದ್ದನ್ನು ಹುಲಿ ರಚನೆ ಮಾಡುವಾಗ ಅಲ್ಲಿದ್ದಂತ ಹುಲಿ ಜೊತೆಗೆ ಕಾದಾಟ ನಡೆಸಲಿದ್ದು, ಬಲಶಾಲಿ ಹುಲಿ ಹೊಸ ಸರಹದ್ದಿ‌ನಲ್ಲಿದ್ದರೇ ಸೋತ ಹುಲಿ ಅನಿವಾರ್ಯವಾಗಿ ಆ ಪ್ರದೇಶ ಬಿಟ್ಟು ಬರಬೇಕಾಗುತ್ತದೆ. ಈ ರೀತಿಯ ಸರಹದ್ದಿನ ಕಾದಾಟದಲ್ಲಿ ಹುಲಿ ಗಾಯಗೊಂಡಿತ್ತು ಎನ್ನಲಾಗಿದೆ.

ಇತ್ತೀಚಿನ ಘಟನೆಗಳು: ಅಸ್ವಸ್ಥಗೊಂಡು ರಸ್ತೆ ಪಕ್ಕದ ಚರಂಡಿಯಲ್ಲಿ ಬಿದ್ದಿದ್ದ ಚಿರತೆ ಬೆಕ್ಕು (ಕಾಡು ಬೆಕ್ಕು) ಅನ್ನು ಅರಣ್ಯಾಧಿಕಾರಿಗಳು ಸಂರಕ್ಷಿಸಿದ್ದ ಘಟನೆ ಶಿವಮೊಗ್ಗದ ಹೊಸನಗರದ ಪುರಪ್ಪೆಮನೆ ಗ್ರಾಮದ ಬಳಿ ಕೆಲ ದಿನಗಳ ಹಿಂದೆ ನಡೆದಿತ್ತು. ಇಲ್ಲಿಯ ಪುರಪ್ಪೆಮನೆ - ಗಡಿಕಟ್ಟೆ ಗ್ರಾಮದ ನಡುವಿನ ರಸ್ತೆ ಪಕ್ಕದ ಚರಂಡಿಯಲ್ಲಿ ಚಿರತೆ ಬೆಕ್ಕು ಅಸ್ವಸ್ಥವಾಗಿ ಬಿದ್ದಿತ್ತು.

ತಕ್ಷಣ ಹೊಸನಗರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ, ಅದನ್ನು ರಕ್ಷಣೆ ಮಾಡಿ ಚಿಕಿತ್ಸೆಗೆಂದು ಶಿವಮೊಗ್ಗದ ಹುಲಿ ಮತ್ತು ಸಿಂಹಧಾಮಕ್ಕೆ ರವಾನಿಸಿದ್ದರು. ಹುಲಿ ಮತ್ತು ಸಿಂಹಧಾಮದ ವೈದ್ಯಾಧಿಕಾರಿಗಳು ಇದಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ದರು. ಚಿರತೆ ಬೆಕ್ಕು ಪಶ್ಚಿಮಘಟ್ಟ ದಟ್ಟಾರಣ್ಯದಲ್ಲಿ ಮಾತ್ರ ಕಂಡು ಬರುತ್ತವೆ. ಇವು ಕಾಡಿನಲ್ಲಿ ಸಣ್ಣಪುಟ್ಟ ಪ್ರಾಣಿಗಳನ್ನು ಬೇಟೆಯಾಡಿ ಬದುಕುತ್ತವೆ.

ಇದನ್ನೂ ಓದಿ: Tiger Mortality Rate: ಹುಲಿಗಳ ಬೀಡು ಕರುನಾಡು: ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಮರಣ ಪ್ರಮಾಣದ ಆತಂಕ

Last Updated : Nov 24, 2023, 5:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.