ETV Bharat / state

ಬಿಳಿಗಿರಿರಂಗನ ಬೆಟ್ಟದಲ್ಲಿ ಹುಲಿ ಸಾವು: ಅರಣ್ಯ ಇಲಾಖೆ ನಡೆಗೆ ಪರಿಸರವಾದಿ ಆಕ್ರೋಶ - ಪರಿಸರವಾದಿ ಜೋಸೆಫ್ ಹೂವರ್

ಸಾಮಾಜಿಕ ಮಾಧ್ಯಮದಲ್ಲಿ ಹೂವರ್ ಪ್ರಶ್ನಿಸಿದ ಬಳಿಕ ಅರಣ್ಯ ಇಲಾಖೆ ಹುಲಿ ಸಾವಿನ ಮಾಹಿತಿ‌ ಹಂಚಿಕೊಂಡಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By

Published : Dec 20, 2022, 11:59 AM IST

ಚಾಮರಾಜನಗರ: ಹುಲಿಯೊಂದು ಮೃತಪಟ್ಟಿರುವ ಘಟನೆ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶವಾದ ಕೊಳ್ಳೇಗಾಲ ವಲಯದಲ್ಲಿ ಶನಿವಾರ ನಡೆದಿದೆ. ಮೃತ‌ ಹುಲಿಗೆ 5-7 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದ್ದು, 2020ರಲ್ಲಿ ಮೊದಲ ಬಾರಿಗೆ ಕ್ಯಾಮರಾ ಟ್ರಾಪಿನಲ್ಲಿ ಸೆರೆಯಾಗಿತ್ತು.‌ ಹುಲಿಯ ಎಲ್ಲಾ ಉಗುರು, ಚರ್ಮ ಸುರಕ್ಷಿತವಾಗಿದ್ದು‌, ಮರಣೋತ್ತರ ಪರೀಕ್ಷೆಗೆ ಮಾದರಿಯನ್ನು ಕಳುಹಿಸಿಕೊಡಲಾಗಿದೆ ಎಂದು ಅರಣ್ಯ ಇಲಾಖೆ ಭಾನುವಾರ ಸಂಜೆ ತಿಳಿಸಿದೆ.‌

ಹೂವರ್ ಕಿಡಿ: ಹುಲಿ ಮೃತಪಟ್ಟು ಒಂದು ದಿನವಾದರೂ ಮಾಧ್ಯಮಗಳಿಗೆ ಮಾಹಿತಿ ಬಿಟ್ಟುಕೊಡದ ಬಗ್ಗೆ ಪರಿಸರವಾದಿ ಜೋಸೆಫ್ ಹೂವರ್ ಕಿಡಿಕಾರಿದ್ದಾರೆ. ಸ್ವಾಭಾವಿಕವಾಗಿ ಹುಲಿ ಮೃತಪಟ್ಟಿದ್ದರೇ ಹುಲಿ ಸಾವನ್ನು ಮುಚ್ಚಿಡುವ ಅವಶ್ಯಕತೆ ಏನಿತ್ತು..? ಕಳ್ಳಬೇಟೆಗೆ ಏನಾದರೂ ಬಲಿಯಾಯಿತೇ ಎಂದು ಪ್ರಶ್ನಿಸಿ ಅರಣ್ಯ ಇಲಾಖೆಯ ನಡೆಗೆ ಆಕ್ರೋಶ ಹೊರಹಾಕಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹೂವರ್ ಪ್ರಶ್ನಿಸಿದ ಬಳಿಕ ಅರಣ್ಯ ಇಲಾಖೆ ಹುಲಿ ಸಾವಿನ ಮಾಹಿತಿ‌ ಹಂಚಿಕೊಂಡಿದೆ.

ಇದನ್ನೂ ಓದಿ: ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಹುಲಿ ಮೃತದೇಹ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.