ETV Bharat / state

Tiger day special: ಇಲ್ಲಿದೆ ಹುಲಿ ಬಗ್ಗೆ ಕುತೂಹಲಕಾರಿ ಮಾಹಿತಿ!

ಹುಲಿ 100 ಬೇಟೆಗಳಲ್ಲಿ ಸರಾಸರಿ ಅದು ಯಶಸ್ಸು ಕಾಣುವುದು ಕೇವಲ 5-7 ಮಾತ್ರ. ಹೊಂಚುಹಾಕಿ ಹುಲಿ ಬೇಟೆಯಾಡುವುದಿಲ್ಲ. ಕಾಡೆಮ್ಮೆ, ಜಿಂಕೆ, ಮರಿ ಆನೆಗಳನ್ನು ಹೆಚ್ಚು ಬೇಟೆಯಾಡಲಿವೆ‌. ಹುಲಿ ಒಂದು ವೇಳೆ ಜಿಂಕೆಗಳನ್ನೇ ತಿಂದರೆ ವರ್ಷಕ್ಕೆ ಸರಾಸರಿ 130-150 ಜಿಂಕೆಗಳು ಬೇಕಾಗಬಹುದು ಎಂದು ವನ್ಯಜೀವಿ ಛಾಯಾಗ್ರಾಹಕ ಅಬ್ದುಲ್‌ ಶೀಜ್ ತಿಳಿಸಿದ್ದಾರೆ.

ಹುಲಿಗಳು
ಹುಲಿಗಳು
author img

By

Published : Jul 29, 2022, 6:00 PM IST

ಚಾಮರಾಜನಗರ: ಸುಸ್ಥಿರ ಪರಿಸರದ ರಾಯಭಾರಿಯಾಗಿರುವ ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿಯೂ ಆಗಿದೆ. ಶಕ್ತಿಗೆ, ಗಾಂಭೀರ್ಯಕ್ಕೆ, ನಡಿಗೆಗೆ, ಮೈಮಾಟಕ್ಕೆ ಹುಲಿಗೆ ಹುಲಿಯೇ ಸಾಟಿಯಾಗಿದೆ. ಇದರ ಬಗೆಗಿನ ಹೆಚ್ಚಿನ ಕುತೂಹಲಕಾರಿ ಮಾಹಿತಿ ತಿಳಿಸಿದ್ದಾರೆ ವನ್ಯಜೀವಿ ಛಾಯಾಗ್ರಾಹಕ ಅಬ್ದುಲ್‌ ಶೀಜ್. ಗ್ರಾಮದ ಸಮೀಪ, ಜಮೀನುಗಳ ಬಳಿ ಹುಲಿ ಕಂಡರೇ ಅರಣ್ಯ‌ ಇಲಾಖೆಗೆ ಮಾಹಿತಿ‌ ಕೊಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ವನ್ಯಜೀವಿ ಛಾಯಾಗ್ರಾಹಕ ಅಬ್ದುಲ್‌ ಶೀಜ್ ಅವರು ಹುಲಿಯ ಜೀವನದ ಬಗ್ಗೆ ಮಾತನಾಡಿದರು

ರಾಜನಂತೆ ಗಾಂಭಿರ್ಯ, ಬೇಟೆಯಲ್ಲೂ ರಾಜಾರೋಷ ತೋರುವ ಹುಲಿರಾಯ ಸಮತೋಲನದ ಪರಿಸರದ ಸಂಕೇತ.‌ ಹುಲಿಯ ವೇಗ ಗಂಟೆಗೆ 60-65 ಕಿ ಮೀ. ಆದರೆ, ಅದರ ಓಟ 35-45 ಮೀ. ಗೆ ಕೊನೆಗೊಳ್ಳಲಿದ್ದು, ಅಷ್ಟರಲ್ಲೇ ಬೇಟೆ ಸಿಕ್ಕರಷ್ಟೇ ಸರಿ. ಇಲ್ಲವೇ ಬೇರೆ ಬೇಟೆಯನ್ನು ಹುಡುಕುತ್ತದೆ‌‌‌‌. ಚಿರತೆ ವರ್ತನೆ ಇದರ ವಿರುದ್ಧವಾಗಿರುತ್ತದೆ. ಏಕೆಂದರೆ, 1 ಕಿ. ಮೀ ತನಕವೂ ಬೇಟೆಯನ್ನು ಅಟ್ಟಾಡಿಸಲಿದೆ.

ಪ್ರತಿದಿನ ಬೇಟೆಯಾಡುವುದಿಲ್ಲ: ಹುಲಿ 100 ಬೇಟೆಗಳಲ್ಲಿ ಸರಾಸರಿ ಅದು ಯಶಸ್ಸು ಕಾಣುವುದು ಕೇವಲ 5-7ರಲ್ಲಿ ಮಾತ್ರ. ಹೊಂಚುಹಾಕಿ ಹುಲಿ ಬೇಟೆಯಾಡುವುದಿಲ್ಲ. ಕಾಡೆಮ್ಮೆ, ಜಿಂಕೆ, ಮರಿ ಆನೆಗಳನ್ನು ಹೆಚ್ಚು ಬೇಟೆಯಾಡಲಿವೆ‌. ಹುಲಿ ಒಂದು ವೇಳೆ ಜಿಂಕೆಗಳನ್ನೇ ತಿಂದರೆ ವರ್ಷಕ್ಕೆ ಸರಾಸರಿ 130-150 ಜಿಂಕೆಗಳು ಬೇಕಾಗಬಹುದು. ಸಾಯಿಸಿದ ಪ್ರಾಣಿಯನ್ನು 300 ಮೀ. ಕ್ಕಿಂತಲೂ ಹೆಚ್ಚಿನ ದೂರ ಎಳೆದೊಯ್ದು ಆಹಾರವನ್ನು ಸುರಕ್ಷಿತ ಮಾಡಿಟ್ಟುಕೊಳ್ಳಲಿದೆ. 2-3 ದಿನ ಅದೇ ಬೇಟೆಯನ್ನು ತಿನ್ನಲಿದ್ದು ಪ್ರತಿದಿನ ಬೇಟೆಯಾಡುವುದಿಲ್ಲ.

ಕಾಡುನಾಯಿಗಳು, ಕಾಡೆಮ್ಮೆಗಳ ಗುಂಪು ಹುಲಿಯನ್ನು ಕೆಲವೊಮ್ಮೆ ಹಿಮ್ಮೆಟ್ಟಿಸುವ ಸಾಮರ್ಥ್ಯ ಹೊಂದಿವೆ. ಬಹಳಷ್ಟು ಬಾರಿ ಇದನ್ನು ಸಫಾರಿಗರು ಕಣ್ತುಂಬಿಕೊಂಡಿದ್ದಾರೆ. ಹುಲಿ ಓಡುವಾಗ ಉಗುರುಗಳು ಒಳಕ್ಕಿರಲಿದ್ದು, ಅದು ದಾಳಿ ಮಾಡುವಾಗ ಮಾತ್ರ ಉಗುರುಗಳು ಹೊರಬರಲಿದೆ. ಹುಲಿ ಮೈಮೇಲಿನ ಪಟ್ಟೆಗಳು ಮನುಷ್ಯನ ಬೆರಳಚ್ಚಿನಂತೆ ಒಂದೊಂದು ಹುಲಿಯ ಮೈ ಮೇಲಿನ ಪಟ್ಟೆಗಳು ಬೇರೆ ಬೇರೆಯಾಗಿರುತ್ತದೆ‌.

ಬಹಳಷ್ಟು ಹುಲಿಗಳು ನರಹಂತಕವಲ್ಲ: ಹುಲಿಯ ಪಂಜಿನ ಹೊಡೆತ ಪ್ರಾಣಿ ಅಥವಾ ಮನುಷ್ಯನ ಮೇಲೆ 140-150 ಕೆಜಿ ಒತ್ತಡವನ್ನು ಸೃಷ್ಟಿಸಲಿದೆ. ಮನುಷ್ಯನಿಗೆ ಹೊಡೆದರೆ ಒಂದೇ ಹೊಡೆತಕ್ಕೆ ಬೆನ್ನುಮೂಳೆ ಮುರಿಯಬಹುದಾಗಿದೆ. ಇಲ್ಲವೇ ತಲೆಯೇ ಕೆಳಕ್ಕೆ ಬೀಳಬಹುದಾಗಿದೆ‌. ಮ್ಯಾಂಗ್ರೋವ್ ಕಾಡಿನ ಹುಲಿಗಳು ಮನುಷ್ಯನನ್ನೇ ತಿನ್ನುವ ಪ್ರವೃತ್ತಿ ಬೆಳೆಸಿಕೊಂಡಿವೆ. ಆದರೆ, ಬಹಳಷ್ಟು ಹುಲಿಗಳು ನರಹಂತಕವಲ್ಲ.

ತಾಯಿಯಿಂದ ಬೇರ್ಪಟ್ಟ ಹುಲಿಗಳು ತನ್ನ ಸರಹದ್ದನ್ನು ನಿರ್ಮಿಸಿಕೊಳ್ಳುವಾಗ ಮನುಷ್ಯನ ಮೇಲೆ ದಾಳಿ ಮಾಡುವ ಸಾಧ್ಯತೆ ಇರಲಿದೆ. ಬೇಟೆಯಾಡುವ ಶಕ್ತಿ ಕಳೆದುಕೊಂಡ, ವಯಸ್ಸಾದ, ಗಾಯಗೊಂಡ ಹುಲಿಗಳು ಮನುಷ್ಯನ ಮೇಲೆ ದಾಳಿ ಮಾಡಲಿದೆಯೇ ಹೊರತು ಇನ್ನುಳಿದ ಪ್ರಕರಣಗಳಲ್ಲಿ ಭಯದಿಂದ ಮನುಷ್ಯನ ಮೇಲೆ ಎರಗುತ್ತವೆ.

ನೆಲ ಕೆರೆಯುವುದು, ಮರಗಳ ಮೇಲೆ ಗೀಚುವುದು, ಮಲ-ಮೂತ್ರ ವಿಸರ್ಜನೆ ಮೂಲಕ ತನ್ನ ಸರಹದ್ದನ್ನು ನಿರ್ಮಿಸಿಕೊಳ್ಳಲಿದೆ. ಒಂದು ಹುಲಿಗೆ ಅಂದಾಜು 60 ಚದರ ಕಿ. ಮೀ ನಷ್ಟು ವಿಸ್ತಾರ ಪ್ರದೇಶ ಅಗತ್ಯವಾಗಿರುತ್ತದೆ. ಗಂಡು ಹುಲಿಗೆ ಹೋಲಿಸಿದರೆ ಹೆಣ್ಣು ಹುಲಿ ಸರಹದ್ದು ಕಡಿಮೆ ಇರಲಿದೆ.

ಕಾಳಗದಲ್ಲಿ ಗೆದ್ದ ಹುಲಿಯದ್ದೇ ಅದಿಪತ್ಯ: ಸರಹದ್ದಿನ ಗುರುತುಗಳನ್ನು ಕಂಡು ಹೆಣ್ಣು ಹುಲಿಗಳು ಸಂತಾನೋತ್ಪತ್ತಿಗೆ ಬರಲಿದೆ. ಒಂದು ಗಂಡು ಹುಲಿಯ ಸರಹದ್ದಿನ ನಡುವೆ ಎರಡು ಹೆಣ್ಣು ಹುಲಿಗಳ ಸರಹದ್ದಿರುವುದು ಸಾಮಾನ್ಯ. ಗಂಡು ಹುಲಿಗಳ ಸಂಖ್ಯೆಯೇ ಹೆಚ್ಚಿದ್ದರೆ ಕಾಳಗ ಏರ್ಪಟ್ಟು ಗೆದ್ದ ಹುಲಿ ಅಧಿಪತ್ಯ ಸಾಧಿಸುತ್ತದೆ. ಹೆಣ್ಣು ಹುಲಿಯನ್ನು ಇನ್ನೂ ತನ್ನ ಜೊತೆಗೆ ಇಟ್ಟುಕೊಳ್ಳುವ ವಾಂಛೆ ಮೂಡಿದ್ದರೆ ಮರಿಗಳನ್ನು ಗಂಡು ಹುಲಿ ತಿಂದು ಹಾಕುತ್ತದೆ.

ಎರಡು ಹೆಣ್ಣು ಹುಲಿಗಳ ನಡುವೆ ಕಾಳಗ, ಹೆಣ್ಣು ಹುಲಿಯೊಂದಿಗೆ ಗಂಡು ಹುಲಿಯ ಕಾದಾಟ ತೀರಾ ಅಪರೂಪ. ಹುಲಿಗಳು ಮರಿಗಳಿಗೆ ಜನ್ಮ ಕೊಟ್ಟ ವೇಳೆ ಯಾವ ಮರಿ ದುರ್ಬಲ ಎನಿಸುತ್ತದೆಯೋ ಅದನ್ನು ತಾವೇ ತಿಂದು ಹಾಕುತ್ತವೆ. ಹುಲಿಯ ಕಿವಿಯ ಹಿಂದೆ ಎರಡು ಕಳ್ಳ ಕಣ್ಣು(Falls eyes) ಇರಲಿದೆ. ಬೇಟೆಯಾಡುವ ಸಮಯದಲ್ಲಿ ಆಥವಾ ಬೇರೆ ಸಮಯದಲ್ಲಿ ಎದುರಾಳಿಗೆ‌ ದಿಕ್ಕು ತಪ್ಪಿಸಲು ಕಣ್ಣುಗಳಂತೆ ಕಾಣುವ ಈ ಭಾಗ ಸಹಾಯಕ.‌

ದೇಹದ ತಾಪಮಾನ ಮತ್ತಷ್ಟು ಹೆಚ್ಚಳ: ಹುಲಿ ಒಂದು ವೇಳೆ ನಿಂತಿರುವಾಗಲೇ ಮೃತಪಟ್ಟರೆ ಎರಡು ದಿನ ಅದರ ಶರೀರ ನಿಂತಂತೇ ಇರಲಿದೆಯಂತೆ.‌ ಇದು ಅದರ ಶಕ್ತಿ ಅಳೆಯಲು ಇರುವ ಅತಿಶಯೋಕ್ತಿ ಪದ. ಹುಲಿಗಳ ದೇಹ ಯಾವಾಗಲೂ ಹೆಚ್ಚು ಉಷ್ಣಾಂಶದಿಂದ ಇರಲಿದ್ದು, ದೇಹದ ಬಿಸಿ ಸಮತೋಲನ‌ ಮಾಡಿಕೊಳ್ಳಲು ನೀರಿನ‌ ಝರಿ, ಹೊಂಡದ ಆಸರೆ ಪಡೆಯುತ್ತದೆ. ಬೇಟೆಗೆ ಹೋದಾಗ ಅದರ ದೇಹದ ತಾಪಮಾನ ಮತ್ತಷ್ಟು ಹೆಚ್ಚಾಗಲಿದೆ.

ಹುಲಿಯ ಬಾಲಕ್ಕೆ ಪೆಟ್ಟಾದರೆ ಓಡಿ ಬೇಟೆಯಾಡುವ ಶಕ್ತಿ ಕಡಿಮೆಯಾಗಲಿದೆ‌. ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಯ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು, ಹುಲಿಯ ಅವಾಸ ಸ್ಥಾನ ಕಿರಿದಾಗುತ್ತಿದೆ.‌ ಹುಲಿಯ ಮೈ ಮೇಲಿನ ಪಟ್ಟೆಗಳ ಮೂಲಕ ಹುಲಿಗಳನ್ನು ಗುರುತಿಸಿ ಸಂಖ್ಯೆಯನ್ನು ಅಂದಾಜಿಸಲಾಗುತ್ತದೆ.

ಅಲಂಕಾರಿಕ‌ ವಸ್ತುವನ್ನಾಗಿ ಬಳಕೆ: ಹುಲಿ ಆಹಾರ ಸರಪಳಿಯ ಮುಖ್ಯ ಕೊಂಡಿಯಾಗಿದೆ. ಮೂಢನಂಬಿಕೆಯಿಂದಾಗಿ ಚೀನಿಯರು ಇದನ್ನು ವೈಯಾಗ್ರ, ಅಲಂಕಾರಿಕ‌ ವಸ್ತುವನ್ನಾಗಿ ಬಳಸಲು ಆರಂಭಿಸಿ ಹುಲಿಗೆ ಕಂಟಕಪ್ರಾಯರಾಗಿದ್ದಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ಹುಲಿಗಳು ಚಾಮರಾಜನಗರ ಜಿಲ್ಲೆಯಲ್ಲಿ ಇವೆ. ಇಲ್ಲಿನ ಸೋಲಿಗರು ಹುಲಿಯನ್ನು ದೊಡ್ಡರಾಯ ಎಂದು ಪೂಜಿಸುತ್ತಾರೆ. ‌ಹುಲಿವಾಹನ ಎಂಬ ದೇವರ ವಾಹನವೂ ಇದೆ.

ಒಟ್ಟಿನಲ್ಲಿ ಕಾಡಿದ್ದರೆ ನಾಡು, ಹುಲಿ ಇದ್ದರೆ ಕಾಡು ಎಂಬ ಸಮತೋಲನ‌ ಪರಿಸರಕ್ಕೆ ಹುಲಿ ಕಳಶಪ್ರಾಯವಾಗಿದೆ.‌ ಹುಲಿಯ ಮೂಲಕ ಮುಂದಿನ ಪೀಳಿಗೆಗೂ ಸಮತೋಲಿತ ಪರಿಸರ ದಾಟಿಸಬೇಕಾದ್ದು ಎಲ್ಲರ ಕರ್ತವ್ಯ.

ಓದಿ: Tiger Day Special: ಹುಲಿಜಿಲ್ಲೆ ಚಂದ್ರಪುರ.. ಇಲ್ಲಿವೆ 250 ಟೈಗರ್ಸ್​​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.