ETV Bharat / state

ಮೇಕೆದಾಟು ಪಾದಯಾತ್ರೆಗೆ ತೆರಳಿದ ಚಾಮರಾಜನಗರದ ಸಾವಿರಾರು ಕಾರ್ಯಕರ್ತರು - ಮೇಕೆದಾಟು ಪಾದಯಾತ್ರೆಗೆ ತೆರಳಿದ ಚಾಮರಾಜನಗರ ಕಾರ್ಯಕರ್ತರು

ರಾಜ್ಯ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಲು ಚಾಮರಾಜನಗರ ಜಿಲ್ಲೆಯಿಂದ ಇಂದು ಸಾವಿರಾರು ಕೈ ಕಾರ್ಯಕರ್ತರು ತೆರಳಿದ್ದಾರೆ.

Mekedatu padayatra
ಮೇಕೆದಾಟು ಪಾದಯಾತ್ರೆಗೆ ತೆರಳಿದ ಸಾವಿರಾರು ಕೈ ಕಾರ್ಯಕರ್ತರು
author img

By

Published : Jan 10, 2022, 12:42 PM IST

ಚಾಮರಾಜನಗರ: ಮೇಕೆದಾಟು ಅಣೆಕಟ್ಟೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ಚಾಮರಾಜನಗರ ಜಿಲ್ಲೆಯಿಂದ ಇಂದು ಬಸ್, ಕಾರುಗಳಲ್ಲಿ ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ತೆರಳಿದ್ದಾರೆ.

ಗುಂಡ್ಲುಪೇಟೆ ತಾಲೂಕಿನಿಂದ 15ಕ್ಕೂ ಹೆಚ್ಚು ಬಸ್​ ಮಾಡಿಕೊಂಡು ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರು, ಕಾರ್ಯಕರ್ತರು ತೆರಳಿದ್ದು, ಹನೂರು ಹಾಗೂ ಚಾಮರಾಜನಗರ ತಾಲೂಕುಗಳಿಂದ ಅಂದಾಜು 2000 ಕ್ಕೂ ಅಧಿಕ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ‌.

ಮೇಕೆದಾಟು ಪಾದಯಾತ್ರೆಗೆ ತೆರಳಿದ ಸಾವಿರಾರು ಕೈ ಕಾರ್ಯಕರ್ತರು

ಗುಂಡ್ಲುಪೇಟೆಯ ಕೈ ಕಾರ್ಯಕರ್ತರು ಮಾಜಿ ಸಚಿವ ದಿವಂಗತ ಎಚ್.ಎಸ್‌. ಮಹಾದೇವ ಪ್ರಸಾದ್ ಅವರ ಪೋಸ್ಟರ್​ಗಳನ್ನು ಹಿಡಿದು ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ದಾರೆ. ಮೇಕೆದಾಟಿನ ಪ್ರದೇಶದ ಒಂದು ಬಂಡೆಯ ಭಾಗ ಕನಕಪುರವಾದರೆ ಮತ್ತೊಂದು ಬಂಡೆಯ ಭಾಗ ಹನೂರು ತಾಲೂಕಿಗೆ ಸೇರಿದ್ದಾಗಿದೆ.

ಓದಿ: ಗೃಹ ಸಚಿವ ಆರಗ ಅಜ್ಞಾನದ ಜ್ಞಾನೇಂದ್ರರಾಗಿದ್ದಾರೆ: ಡಿಕೆ ಶಿವಕುಮಾರ್ ಟೀಕಾಪ್ರಹಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.