ಚಾಮರಾಜನಗರ: ಗಮನ ಬೇರೆಡೆ ಸೆಳೆದು ವ್ಯಾಪಾರಿಯೊಬ್ಬರಿಂದ 5 ಲಕ್ಷ ರೂ. ಎಗರಿಸಿರುವ ಘಟನೆ ಕೊಳ್ಳೇಗಾಲದ ಎಪಿಎಂಸಿ ಬಳಿ ನಡೆದಿದೆ. ಬಾಲಾಜಿ ಎಂಬ ತರಕಾರಿ ವ್ಯಾಪಾರಿ ಹಣ ಕಳೆದುಕೊಂಡಿದ್ದಾರೆ. ಇವರು ಬ್ಯಾಂಕಿನಿಂದ ಹಣ ಡ್ರಾ ಮಾಡಿ ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟಿದ್ದರು. ಅಂಗಡಿಗೆ ಹಿಂತಿರುಗಿದಾಗ ನಾಲ್ವರ ಗ್ಯಾಂಗ್ ಕಳ್ಳತನ ಮಾಡಿದ್ದಾರೆ.
ಇದನ್ನೂ ಓದಿ: ಚಿನ್ನಾಭರಣ ದೋಚಿದ್ದ ಅಣ್ಣ-ತಮ್ಮ ಸೇರಿ ಮೂವರು ಅಂದರ್: ಕಳ್ಳತನಕ್ಕೆ ಪೋಷಕರು ಸಾಥ್
ಬಾಲಾಜಿ ಅವರು ಸ್ಕೂಟರ್ ಕೀಯನ್ನು ಅಲ್ಲೇ ಬಿಟ್ಟಿದ್ದರಿಂದ ಮೂವರು ಮಾತನಾಡುತ್ತಾ ಗಮನ ಬೇರೆಡೆ ಸೆಳೆದು ಮತ್ತೋರ್ವ ಹಣ ಎಗರಿಸಿದ್ದಾನೆ. ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.