ಚಾಮರಾಜನಗರ: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವ ಗುಂಡ್ಲುಪೇಟೆಯಲ್ಲಿ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಂತೆ ಮಾಸ್ಕ್ ಮಾರುವ ಹುಡುಗ ಥರ್ಮಲ್ ಟೆಸ್ಟ್ ಮಾಡಿದ್ದಾನೆ.
![ಮಾಸ್ಕ್ ಮಾರುವ ಹುಡುಗನಿಂದ ಥರ್ಮಲ್ ಟೆಸ್ಟ್](https://etvbharatimages.akamaized.net/etvbharat/prod-images/7818972_173_7818972_1593428272394.png)
ತಾಲೂಕು ಕಚೇರಿಗೆ ನಿತ್ಯ ನೂರಾರು ಮಂದಿ ಎಡತಾಕುವುದರಿಂದ ಸ್ಯಾನಿಟೈಸರ್ ಹಾಗೂ ಥರ್ಮಲ್ ಟೆಸ್ಟ್ ಮಾಡಲೇನೋ ಪ್ರಾರಂಭಿಸಿದ್ದಾರೆ. ಆದರೆ, ಥರ್ಮಲ್ ಟೆಸ್ಟ್ ಮಾತ್ರ ಮಾಸ್ಕ್ ಮಾರುವ ಹುಡುಗ ಮಾಡುತ್ತಿರುವುದು ತಹಶೀಲ್ದಾರ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಗಮನಕ್ಕೆ ಬಂದರೂ ತಲೆಕೆಡಿಸಿಕೊಳ್ಳದಿರುವ ಆರೋಪ ಕೇಳಿಬಂದಿದೆ.
![ಮಾಸ್ಕ್ ಮಾರುವ ಹುಡುಗನಿಂದ ಥರ್ಮಲ್ ಟೆಸ್ಟ್](https://etvbharatimages.akamaized.net/etvbharat/prod-images/kn-cnr-02-tharmal-test-av-7202614_29062020160608_2906f_1593426968_353.jpg)
14-15 ವರ್ಷದ ಹುಡುಗನೋರ್ವ ಎಡಗೈಯಲ್ಲಿ ಮಾಸ್ಕ್ ಹಿಡಿದು ಬಲಗೈಯಲ್ಲಿ ಥರ್ಮಲ್ ಟೆಸ್ಟ್ ನಡೆಸುತ್ತಿರುವ ಫೋಟೋಗಳನ್ನು ಸೆರೆ ಹಿಡಿದು ಸ್ಥಳೀಯರೊಬ್ಬರು ಈಟಿವಿ ಭಾರತಕ್ಕೆ ನೀಡಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ತಹಶಿಲ್ದಾರ್ ನಂಜುಡಯ್ಯ ಅವರ ಪ್ರತಿಕ್ರಿಯೆ ಪಡೆಯಲು ಯತ್ನಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ.