ETV Bharat / state

ಹನೂರಲ್ಲಿ ಹಳ್ಳ ದಾಟಿ ಅಂತ್ಯಕ್ರಿಯೆ: ಎದುರಾಯ್ತು ಶವ ಕೊಚ್ಚಿಹೋಗುವ ಆತಂಕ

author img

By

Published : Oct 29, 2022, 11:02 PM IST

ಗ್ರಾಮದಲ್ಲಿ ಸ್ಮಶಾನಕ್ಕೆ ಸ್ಥಳವಿಲ್ಲದ ಕಾರಣ ಶವವನ್ನು ಹೊತ್ತು ಹಳ್ಳ ದಾಟಿ ಅಂತ್ಯಕ್ರಿಯೆ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

kn_cnr_04_
ಹನೂರಲ್ಲಿ ಹಳ್ಳ ದಾಟಿ ಅಂತ್ಯಕ್ರಿಯೆ

ಚಾಮರಾಜನಗರ: ಸ್ಮಶಾನಕ್ಕೆ ಸ್ಥಳವಿಲ್ಲದ ಕಾರಣ ಮೃತ ವ್ಯಕ್ತಿಯೊಬ್ಬರ ಶವ ಹೊತ್ತು ಹಳ್ಳದಾಟಿ ಅಂತ್ಯಕ್ರಿಯೆ ಮಾಡಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಅಜ್ಜೀಪುರ ಗ್ರಾಮ ಪಂಚಾಯತ್​ ವ್ಯಾಪ್ತಿಯ ಅಂಬಿಕಾಪುರ ಗ್ರಾಮದಲ್ಲಿ ನಡೆದಿದೆ.

ಆದಿ ಜಾಂಬವ ಸಮುದಾಯದಾಯಕ್ಕೆ ಸೇರಿದ್ದ ಪಳನಿಯಮ್ಮ ಎಂಬುವವರು ಮೃತಪಟ್ಟ ಹಿನ್ನೆಲೆ ಅಂತ್ಯಕ್ರಿಯೆ ಮಾಡಲು ಜಾಂಬವ ಸಮುದಾಯಕ್ಕೆ ಸ್ಮಶಾನದ ವ್ಯವಸ್ಥೆಯಿಲ್ಲದ ಕಾರಣ ಮೃತಪಟ್ಟ ವ್ಯಕ್ತಿಯನ್ನು ಉಡುತೊರೆ ಹಳ್ಳ ಎಂಬ ನೀರಿನ ಝರಿ ದಾಟಿ ಅಂತ್ಯಕ್ರಿಯೆ ಮಾಡಿದ್ದಾರೆ. ಗ್ರಾಮದಲ್ಲಿ ಆದಿ ಜಾಂಬವ ಮತ್ತು ಪರಿಶಿಷ್ಟ ಜಾತಿ ಸಮುದಾಯದವರಿಗೆ ಸ್ಮಶಾನ ವ್ಯವಸ್ಥೆ ಇಲ್ಲ. ತಮ್ಮ ಸಮುದಾಯದ ವ್ಯಕ್ತಿ ಸತ್ತರೇ ನಮಗೆ ಅಂತ್ಯಕ್ರಿಯೆ ಮಾಡಲು ಉಡುತೊರೆ ಹಳ್ಳವೇ ಗತಿ. ಈ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ತಿಳಿದಿದ್ದರೂ ತಮಗೆ ಸ್ಮಶಾನ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಕಳೆದ ವಾರ ಇದೇ ಗ್ರಾಮದ ಪಾಪಮ್ಮ ಎಂಬವರ ಮಗ ಷಣ್ಮುಗ ಎನ್ನುವವರು ಮೃತಪಟ್ಟಿದ್ದರು. ಸ್ಮಶಾನವಿಲ್ಲದೇ ಉಡುತೊರೆ ಹಳ್ಳದ ಬಳಿ ಅಂತ್ಯಕ್ರಿಯೆ ಮಾಡಲಾಗಿತ್ತು. ಸತತ ಮಳೆಯಿಂದಾಗಿ ಉಡುತೊರೆ ಹಳ್ಳ ತುಂಬಿ ಹರಿದ ಪರಿಣಾಮ ಹೂತು ಹಾಕಿದ್ದ ಶವವೇ ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು. ಈ ಮಧ್ಯೆ ಇಂದು ಪಳನಿಯಮ್ಮ ಮೃತಪಟ್ಟಿದ್ದಾರೆ. ಅಂತ್ಯಕ್ರಿಯೆಯನ್ನು ನೀರು ದಾಟಿ ಉಡುತೊರೆ ಹಳ್ಳದಲ್ಲೇ ಮಾಡಲಾಗಿದೆ. ಮತ್ತೊಮ್ಮೆ ಹಳ್ಳ ತುಂಬಿ ಹರಿದರೆ ಈ ಶವವೂ ನೀರಿನಲ್ಲಿ ಕೊಚ್ಚಿಹೋಗುವ ಆತಂಕ ಕುಟುಂಬಸ್ಥರಲ್ಲಿ ಮನೆ ಮಾಡಿದೆ.

ಗ್ರಾಮದಲ್ಲಿ ನಮಗೆ ಸ್ಮಶಾನವಿಲ್ಲದ ಕಾರಣ ಮೃತರನ್ನು ಹಳ್ಳದಲ್ಲೇ ಅಂತ್ಯಕ್ರಿಯೆ ಮಾಡುವಂತಾಗಿದೆ. ದಯವಿಟ್ಟು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮಗೆ ಯಾವುದೇ ಸೌಲಭ್ಯ ಕೊಡದಿದ್ದರೂ ಸ್ಮಶಾನ ವ್ಯವಸ್ಥೆ ಕಲ್ಪಿಸುವ ಮೂಲಕ ಮೃತರಿಗೆ ಮುಕ್ತಿ ಕಲ್ಪಿಸಿ ಎಂದು ಇತ್ತೀಚೆಗೆ ನಿಧನರಾದ ಷಣ್ಮುಖ ಅವರ ತಾಯಿ ಗೋಳಾಡಿದ್ದಾರೆ. ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಸ್ಮಶಾನವಿಲ್ಲದ ಗ್ರಾಮಗಳನ್ನು ಈಗಾಗಲೇ ಪಟ್ಟಿ ಮಾಡಲಾಗಿದೆ. ಸರ್ಕಾರಿ ಜಮೀನು ಇರುವ ಕಡೆ ಸರ್ವೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಆದಷ್ಟು ಬೇಗ ಸ್ಮಶಾನವಿಲ್ಲದ ಗ್ರಾಮಗಳಲ್ಲಿ ಸ್ಮಶಾನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಹಶೀಲ್ದಾರ್ ಆನಂದಯ್ಯ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ: ಪಾಲಿಕೆಯಿಂದ ರಸ್ತೆ ಗುಂಡಿ ಮುಚ್ಚುವ ಪ್ರಕ್ರಿಯೆ ಚುರುಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.