ಚಾಮರಾಜನಗರ: ಒಂದು ಕಾಲದಲ್ಲಿ ಮೆರವಣಿಗೆ ವಿಚಾರಕ್ಕೆ ಸಂಸತ್ತಿನಲ್ಲೂ ಸದ್ದು ಮಾಡಿದ್ದ ದೊಡ್ಡ ಗಣಪತಿ, ಪೊಲೀಸ್ ಗಣಪನನ್ನು ಈ ಬಾರಿ ಉತ್ಸವವೇ ಇಲ್ಲದೇ ಸರಳವಾಗಿ ನಿಮಜ್ಜನಗೊಳಿಸಲಾಯಿತು.
ಹೌದು, ಕೊರೊನಾ ಮಹಾಮಾರಿಯಿಂದ ಪ್ರತಿಷ್ಠಿತ ಗಣಪತಿ ಮಂಡಲಿಯಾದ ನಗರದ ವಿದ್ಯಾ ಗಣಪತಿ ಮಂಡಲಿಯು ಈ ಬಾರಿ ಸರಳವಾಗಿ ಸಣ್ಣ ಗಣಪತಿಯನ್ನು ಪೂಜಿಸಿ ಪ್ರತಿಷ್ಠಾಪಿಸಿದ್ದ ಸ್ಥಳದಲ್ಲೇ ಗಣಪತಿಯನ್ನು ನಿಮಜ್ಜನ ಮಾಡಿದರು.
ವಿದ್ಯಾ ಗಣಪತಿ ಮಂಡಲಿ ಪ್ರತಿಷ್ಠಾಪಿಸುವ ಗಣಪತಿಗೆ ದೊಡ್ಡ ಗಣಪತಿ, ಆರ್ಎಸ್ಎಸ್ ಗಣಪತಿ, ಪೊಲೀಸ್ ಗಣಪತಿ ಎಂದು ಕರೆಯಲಾಗುತ್ತಿದ್ದು, ಬರೋಬ್ಬರಿ 18 ತಾಸು ಗಣಪನನ್ನು ಮೆರವಣಿಗೆ ಮಾಡಿದ ಉದಾಹರಣೆಯೂ ಇದೆ. 58 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉತ್ಸವ ಮಾಡದೇ ಗಣಪತಿಯನ್ನು ನಿಮಜ್ಜನ ಮಾಡಲಾಗಿದೆ.