ETV Bharat / state

ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಹೊತ್ತೊಯ್ದ ಖದೀಮರು: ಅದೃಷ್ಟವಶಾತ್​​ 450 ಗ್ರಾಂ ಚಿನ್ನ ಭದ್ರ

ಆಶ್ರಯ ಬಡಾವಣೆಯ ನಿವಾಸಿಯಾದ ಮಹಮ್ಮದ್ ತಸ್ಕೀನ್ ಎಂಬುವರ ಮನೆಯಲ್ಲಿ ಕಳ್ಳತನವಾಗಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಖದೀಮರು ಎಗರಿಸಿದ್ದಾರೆ. ಅದೃಷ್ಟವಶಾತ್ 450 ಗ್ರಾಂ ಚಿನ್ನ ಭದ್ರವಾಗಿದೆ ಎಂದು ತಿಳಿದುಬಂದಿದೆ.

Theft in Chamarajanagara
ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಹೊತ್ತೋಯ್ದ ಖದೀಮರು...ಅದೃಷ್ಟವಶಾತ್​ 450 ಗ್ರಾಂ.ಚಿನ್ನ ಭದ್ರ
author img

By

Published : Feb 29, 2020, 6:17 PM IST

ಚಾಮರಾಜನಗರ: ವಿದ್ಯುತ್ ಗುತ್ತಿಗೆದಾರನ ಮನೆಯೊಂದಕ್ಕೆ ಕನ್ನ ಹಾಕಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಹೊತ್ತೊಯ್ದಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.

Theft in Chamarajanagara
ಚಾಮರಾಜನಗರದಲ್ಲಿ ಕಳ್ಳತನ

ಪಟ್ಟಣದ ಆಶ್ರಯ ಬಡಾವಣೆಯ ನಿವಾಸಿಯಾದ ಮಹಮ್ಮದ್ ತಸ್ಕೀನ್ ಎಂಬುವರ ಮನೆಗೆ ನುಗ್ಗಿದ ಕಳ್ಳರು, ಮನೆಯಲ್ಲಿದ್ದ ಸುಮಾರು 160 ಗ್ರಾಂ ಚಿನ್ನಾಭರಣ, 50 ಸಾವಿರ ನಗದು, ಬೆಲೆಬಾಳುವ 6 ರಾಡೋ ವಾಚ್​ಗಳು, ಕೆನಾನ್ ಕ್ಯಾಮರಾ ಎಗರಿಸಿಕೊಂಡು ಪರಾರಿಯಾಗಿದ್ದಾರೆ.

ಅದೃಷ್ಟವಶಾತ್ ಮಂಚದ ಬಾಕ್ಸ್​ನಲ್ಲಿದ್ದ 450 ಗ್ರಾಂ ಚಿನ್ನ ಭದ್ರವಾಗಿದೆ ಎಂದು ತಿಳಿದುಬಂದಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದ ವೇಳೆ ಕಳ್ಳರು ಕೈಚಳಕ ತೋರಿಸಿದ್ದು, ಕಳೆದ 4 ದಿನಗಳಿಂದ ಸಿಸಿಟಿವಿ ಕೆಟ್ಟಿತ್ತು ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.