ಕೊಳ್ಳೇಗಾಲ (ಚಾಮರಾಜನಗರ): ಕೊರೊನಾದಿಂದ ಕಂಗಾಲಾಗಿದ್ದ ಸಿನಿಮಾ ಉದ್ಯಮಕ್ಕೆ ಸರ್ಕಾರದಿಂದ ಸಿಹಿಸುದ್ದಿ ದೊರಕಿದ ಬೆನ್ನಲ್ಲೇ ಪಟ್ಟಣದ ಚಿತ್ರಮಂದಿರ ತೆರೆದಿದ್ದು, ಸಿನಿ ಪ್ರಿಯರು ಚಿತ್ರಮಂದಿರಕ್ಕೆ ಮುಗಿಬಿದ್ದಿದ್ದಾರೆ.
ಕೊಳ್ಳೇಗಾಲದಲ್ಲಿ ಬೆಳಗ್ಗೆಯಿಂದಲೇ ಸಿನಿಪ್ರಿಯರು ಸಿನಿಮಾ ವೀಕ್ಷಿಸಲು ಚಿತ್ರಮಂದಿರದ ಬಳಿ ನೆರೆದಿದ್ದರು. ಕೊಳ್ಳೇಗಾಲದ ಶ್ರೀ ಕೃಷ್ಣ ಟಾಕೀಸ್ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಸರ್ಕಾರದ ಆದೇಶದಂತೆ ಕೊರೊನಾ ನಿಯಮಗಳನ್ನು ಪಾಲಿಸಿ ಜನರಿಗೆ ಪ್ರವೇಶ ನೀಡಲಾಗುತ್ತಿದ್ದು. ಪ್ರತಿಯೊಬ್ಬರ ಕೈಗೂ ಸ್ಯಾನಿಟೈಸರ್ ಹಾಕಿ, ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ.
ಇದನ್ನೂ ಓದಿ: ವಿದ್ಯುತ್ ಬಸ್ ಖರೀದಿ ಇಲ್ಲ, ಗುತ್ತಿಗೆ ಆಧಾರದಲ್ಲಿ ಪ್ರಾಯೋಗಿಕ ಸಂಚಾರವಷ್ಟೇ.. ಸಾರಿಗೆ ಸಚಿವ ಲಕ್ಷ್ಮಣ ಸವದಿ