ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಕೆರೆಯಲ್ಲಿ ಈಜು ಕಲಿಯಲು ಹೋಗಿದ್ದ ಏಳು ಮಂದಿಯಲ್ಲಿ ಒಬ್ಬ ಮೃತಪಟ್ಟಿದ್ದಾನೆ.
ನಂದೀಶ್ (18) ಮೃತ ಯುವಕ. ತಾಲೂಕಿನ ಚಿಕ್ಕತುಪ್ಪೂರು ಗ್ರಾಮದ ತನ್ನ ಸ್ನೇಹಿತರೊಂದಿಗೆ ಬರಗಿ ಕೆರೆಗೆ ಈಜಲು ತೆರಳಿದ್ದ. ಕೆರೆಗೆ ತೆರಳಿದ್ದವರಲ್ಲಿ ಒಬ್ಬರಿಗೂ ಈಜು ಬರುತ್ತಿರಲಿಲ್ಲ ಎಂದು ತಿಳಿದು ಬಂದಿದೆ.
ಆತನ ಎಲ್ಲಾ ಸ್ನೇಹಿತರು ಕೆರೆ ತುದಿಯಲ್ಲೇ ಇದ್ದರು. ನಂದೀಶ ಮಾತ್ರ ಕೆರೆಗಿಳಿದು ನೀರಿನಲ್ಲಿ ಮುಳುಗಿ ಸಹಾಯಕ್ಕಾಗಿ ಅಂಗಲಾಚಿದ್ದ. ಆದರೆ, ಸ್ನೇಹಿತರಿಗೂ ಈಜು ಬಾರದ ಕಾರಣ ಸಾವನ್ನಪ್ಪಿದ್ದಾನೆ ಎನ್ನಲಾಗ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಕುರಿತು ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.