ಗುಂಡ್ಲುಪೇಟೆ: ಜಮೀನಿಗೆ ಪೈಪ್ ನೀಡಿದ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.
ಇದೇ ಗ್ರಾಮದ ಮಾದೇಶ ಕೊಲೆಗೀಡಾಗಿರುವ ವ್ಯಕ್ತಿ. ಈತನನ್ನು ರಾಜು ಎಂಬಾತ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಮಾದೇಶನಿಗೆ ಬೆಳೆಗೆ ನೀರು ಹಾಯಿಸಲು ಸ್ಪ್ರಿಂಕ್ಲರ್ ಪೈಪ್ಗಳನ್ನು ರಾಜು ನೀಡಿದ್ದ, ತಿಂಗಳು ಕಳೆದರೂ ಮಾದೇಶ ವಾಪಸ್ ನೀಡಿರಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಕುಪಿತಗೊಂಡ ರಾಜು ತನ್ನಲ್ಲಿದ್ದ ಮಚ್ಚಿನಿಂದ ಹೊಡೆದು ಮಾದೇಶನನ್ನು ಕೊಲೆ ಮಾಡಿದ್ದಾನೆ.
ಮಂಗಳವಾರ ಮಧ್ಯ ರಾತ್ರಿಯೇ ಕೊಲೆಯಾಗಿದೆ. ಬೆಳಗ್ಗೆ 10ರ ಸಮಯದಲ್ಲಿ ರಾಜು ಪೊಲೀಸ್ ಠಾಣೆಗೆ ಬಂದು ಶರಣಾದಾಗ ವಿಷಯ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.