ಚಾಮರಾಜನಗರ: ಕಳೆದ ವಾರ ವಾಯುಭಾರ ಕುಸಿತದಿಂದ ಸುರಿದ ಭಾರಿ ಮಳೆಗೆ ಕೆರೆಗಳು ಮೈದುಂಬಿದ್ದು, ಚಾಮರಾಜನಗರದ ರೈತರ ಜೀವನಾಡಿ ಚಿಕ್ಕಹೊಳೆ ಹಾಗೂ ಸುವರ್ಣಾವತಿ ಡ್ಯಾಂ ಭರ್ತಿಯಾಗಿ ಕೋಡಿ ಬಿದ್ದಿವೆ. 5 ತಿಂಗಳಲ್ಲಿ ಎರಡನೇ ಬಾರಿಗೆ ಡ್ಯಾಂ ತುಂಬಿ ಕೋಡಿ ಬಿದ್ದಿದ್ದು, ಜಲ ವೈಭವ ನೋಡು ಸಾರ್ವಜನಿಕರು ಬರುತ್ತಿದ್ದಾರೆ. ಹಿಂದೆಲ್ಲಾ ಮೇ ಮಾಸದಲ್ಲಿ ಅರ್ಧದಷ್ಟು ಮಾತ್ರ ತುಂಬುತ್ತಿದ್ದ ಜಲಾಶಯಗಳು ಈಗ ಮೇ ತಿಂಗಳಲ್ಲೇ ಕೋಡಿ ಬೀಳುವ ಮೂಲಕ ರೈತರ ಮೊಗದಲ್ಲಿ ಮಂದಹಾಸವನ್ನೂ ಮೂಡಿಸಿದೆ.
ಕಳೆದ ವರ್ಷ ಇದೇ ಸಮಯದಲ್ಲಿ ಚಿಕ್ಕಹೊಳೆ ಜಲಾಶಯದಲ್ಲಿ 59 ಅಡಿ ನೀರಿದ್ದರೆ, ಈ ವರ್ಷ 74 ಅಡಿ ನೀರು ಶೇಖರಣೆಗೊಂಡಿದೆ. ಸುವರ್ಣಾವತಿಯಲ್ಲಿ 55 ಅಡಿ ನೀರಿದೆ. ಭರ್ತಿಯಾಗಿರುವ ಸುವರ್ಣಾವತಿ ನೋಡಲು ತಮಿಳುನಾಡಿಗೆ ತೆರಳುವವರು, ಚಾಮರಾಜನಗರ ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಕೆರೆಯಲ್ಲಿ ಈಜಲು ಹೋಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು