ETV Bharat / state

SSLC ಪರೀಕ್ಷೆ ನಡೆಸಬೇಕೆನ್ನುವ ಅಭಿಪ್ರಾಯ ಬರುತ್ತಿದೆ: ಸಚಿವ ಸುರೇಶ್ ಕುಮಾರ್

ಎಸ್​ಎಸ್​ಎಲ್​ಸಿ, ಪಿಯುಸಿ ಪರೀಕ್ಷೆಗಳನ್ನು ನಡೆಸಬೇಕೆನ್ನುವ ಅಭಿಪ್ರಾಯ ಬರುತ್ತಿದೆ. ಆದರೆ ಪರೀಕ್ಷೆ ನಡೆಸಲು ಇನ್ನೂ ಎರಡು ತಿಂಗಳು ಇರುವುದರಿಂದ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

SSLC ಪರೀಕ್ಷೆ  ಕುರಿತು ಸುರೇಶ್ ಕುಮಾರ್ ಅಭಿಪ್ರಾಯ

author img

By

Published : Apr 16, 2021, 12:31 PM IST

ಚಾಮರಾಜನಗರ: ಎಸ್​ಎಸ್​ಎಲ್​ಸಿ, ಪಿಯುಸಿ ಪರೀಕ್ಷೆಗಳನ್ನು ನಡೆಸಬೇಕೆನ್ನುವ ಅಭಿಪ್ರಾಯ ಬರುತ್ತಿದೆ. ಈ ಕುರಿತು ಹೊರಟ್ಟಿ ಅವರು ಪತ್ರ ಬರೆದಿದ್ದಾರೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

SSLC ಪರೀಕ್ಷೆ ಕುರಿತು ಸುರೇಶ್ ಕುಮಾರ್ ಅಭಿಪ್ರಾಯ

ಹನೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಳೆದ ಬಾರಿ ನೀಡಿದ್ದ SOP ಗಿಂತ ಸುಧಾರಿತ SOP ತಯಾರಿಸುವಂತೆ ತಜ್ಞರಿಗೆ ತಿಳಿಸಲಾಗಿದೆ.‌ ಪರೀಕ್ಷೆ ನಡೆಸಲು ಇನ್ನೂ ಎರಡು ತಿಂಗಳು ಇರುವುದರಿಂದ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಸಿಎಂ ಸರ್ವಪಕ್ಷ ಸಭೆ ಕರೆದಿದ್ದಾರೆ. ಕಾಂಗ್ರೆಸ್ ಹಾಗೂ ನಾವು ವಿರೋಧಿಗಳಿರಬಹುದು. ಆದರೆ, ನಮಗೆ ಒಂದೇ ಶತ್ರುವೆಂದರೆ ಕೊರೊನಾ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಮಹಾಮಾರಿಯನ್ನು ಎದುರಿಸಬೇಕಿದೆ.‌ ಲಾಕ್​ಡೌನ್​ ಕುರಿತಾದ ನನ್ನ ಅಭಿಪ್ರಾಯವನ್ನು ಸಿಎಂ ಅವರಿಗೆ ತಿಳಿಸುತ್ತೇನೆ ಎಂದರು.

ಅಸಹಕಾರ ಚಳವಳಿ ಅಗತ್ಯ:

ಕೊರೊನಾ ವಿರುದ್ಧ ನಾವು ಅಸಹಕಾರ ಚಳವಳಿ ನಡೆಸಬೇಕಿರುವುದು ಅನಿವಾರ್ಯ. ಕೊರೊನಾ ಸಾವು ನಮಗೆ ಸಂಖ್ಯೆಯಾಗಿ ಈಗ ಕಾಣಬಹುದು. ಆದರೆ ದುಡಿಯುವ ವ್ಯಕ್ತಿಯನ್ನು, ಮನೆಯ ಹಿರಿಯರನ್ನು ಕಳೆದುಕೊಂಡವರ ದುಃಖ ಅನುಭವಿಸಿದವರಿಗಷ್ಟೇ ಗೊತ್ತು. ಕೊರೊನಾ ವಿರುದ್ಧ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ, ಅಸಹಕಾರ ಚಳವಳಿ ಮಾಡಿದರಷ್ಟೇ ಕೊರೊನಾ ಮಣಿಸಲು ಸಾಧ್ಯ ಎಂದು ಸಚಿವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.