ಚಾಮರಾಜನಗರ: ದೀರ್ಘ ಕಾಲದ ರಜೆಯಿಂದ ಪರೀಕ್ಷೆಯ ಮನಸ್ಥಿತಿಗೆ ಮಕ್ಕಳನ್ನು ಕರೆತರುವ ಸಲುವಾಗಿ ಪುನರ್ ಮನನದ ತರಗತಿ ನಡೆಯಲಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.
ದೆಹಲಿಯ ನಿಜಾಮುದ್ದಿನ್ ಸಭೆ ಆಗದಿದ್ದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಬಹಳಷ್ಟು ಕಡಿಮೆಯಾಗುತ್ತಿತ್ತು. ಹಾಗೆಯೇ ಜುಬಿಲಿಯೆಂಟ್ ಪ್ರಕರಣದಿಂದ ಸೋಂಕಿತರ ಸಂಖ್ಯೆ ಏರಿದೆ. ರಾಜ್ಯದಲ್ಲಿ ಕೊರೊನಾ ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡಿದ್ದು ಏ. 14 ರವರೆಗೆ ಕೊರೊನಾ ತಹಬದಿಗೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ದೀಪ ಬೆಳಗಲು ಮೋದಿ ಅವರು ಕರೆ ನೀಡಿದ್ದು, ಇದು ಒಂದು ಆಂದೋಲನ ಹಾಗೂ ಚಟುವಟಿಕೆಯಾಗಿದೆ. ಕೊರೊನಾ ವಿರುದ್ಧ ಹೋರಾಟದಲ್ಲಿ ನಮ್ಮ ಒಗ್ಗಟ್ಟನ್ನು ಇದು ತೋರಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪುಣಜನೂರು ಗಿರಿಜನ ಆಶ್ರಮ ಶಾಲೆಗೆ ಭೇಟಿ ನೀಡಿ ನಿರ್ಗತಿಕರ ಕ್ಷೇಮ ವಿಚಾರಿಸಿ ಲಾಕ್ಡೌನ್ ಮುಗಿಯುತ್ತಿದ್ದಂತೆ ನಿಮ್ಮ-ನಿಮ್ಮ ಊರುಗಳಿಗೆ ಕಳುಹಿಸಲಾಗುವುದು ಎಂದು ಅವರಿಗೆ ಧೈರ್ಯ ಹೇಳಿದರು.