ETV Bharat / state

ಅಸ್ವಸ್ಥರಾಗಿದ್ದವರ ಆರೋಗ್ಯ ವಿಚಾರಿಸಿದ ಎಸಿ: ತಪಿತಸ್ಥರ ವಿರುದ್ಧ ಸೂಕ್ತ ಕ್ರಮದ ಭರವಸೆ - ಈಟಿವಿ ಭಾರತ ಇಂಪ್ಯಾಕ್ಟ್

’’ಕೊಳ್ಳೇಗಾಲದಲ್ಲಿ ಏಳಕ್ಕೂ ಹೆಚ್ಚು ಮಂದಿ ದಿಢೀರ್ ಅಸ್ವಸ್ಥ: ಕಲುಷಿತ ನೀರು ಕುಡಿದಿರುವ ಶಂಕೆ’’ ಎಂಬ ಶೀರ್ಷಿಕೆಯಡಿ ಈಟಿವಿ ಭಾರತದಲ್ಲಿ ವರದಿಯಾದ ಸುದ್ದಿಯಿಂದ ಎಚ್ಚೆತ್ತ ತಾಲೂಕು ಆಡಳಿತ ಎಸಿ ಗಿರೀಶ್ ದಿಲೀಪ್ ಬದೋಲೆ, ತಹಶೀಲ್ದಾರ್ ಕುನಾಲ್ ಜಂಟಿಯಾಗಿ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಯೋಗ ಕ್ಷಮ ವಿಚಾರಿಸಿದ್ದಾರೆ.

AC Girish Dilip Badole
ಎಸಿ ಗಿರೀಶ್ ದಿಲೀಪ್ ಬದೋಲೆ
author img

By

Published : Oct 27, 2020, 11:04 PM IST

ಕೊಳ್ಳೇಗಾಲ: ನಗರದ ಆಶ್ರಯ ಬಡಾವಣೆಯಲ್ಲಿ ಏಳಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಕಲುಷಿತ ನೀರಿನಿಂದ ಈ ಘಟನೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದ್ದ ಹಿನ್ನೆಲೆ ಎಸಿ‌ ಹಾಗೂ ತಹಶೀಲ್ದಾರ್ ಕುನಾಲ್ ಅಸ್ವಸ್ಥರಿದ್ದ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.

ನಂತರ ವೈದ್ಯರಿಂದ ಮಾಹಿತಿ ಪಡೆದು 8 ಮಂದಿ ಭೇದಿ, ವಾಂತಿ ಇನ್ನಿತರ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ 6 ಮಂದಿ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈಗಾಗಲೇ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೀರು ಕಲುಷಿತ ಶಂಕೆ ಆರೋಪದ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದು ಕೊಂಡಿದ್ದಾರೆ. ನಾಳೆ ನಾನೇ ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡುತ್ತೇನೆ. ಇದರಲ್ಲಿ ನಗರಸಭೆ ಸಿಬ್ಬಂದಿ ಕರ್ತವ್ಯ ಲೋಪವಿದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅಸ್ವಸ್ಥರಾಗಿದ್ದವರ ಆರೋಗ್ಯ ವಿಚಾರಿಸಿದ ಎಸಿ

ನಗರಸಭೆ ಆಯುಕ್ತರಿಗೆ ತರಾಟೆ: ಆಸ್ಪತ್ರೆಯಲ್ಲಿರುವ ಅಸ್ವಸ್ಥರ ಭೇಟಿ ವೇಳೆ ನಗರಸಭೆ ಆಯುಕ್ತ ನಾಗಶೆಟ್ಟಿ ಅಧಿಕಾರಿಗಳೊಂದಿಗೆ ಆಗಮಿಸಿದ್ದರು. ಇದೇ ವೇಳೆ, ಕುಟುಂಬದವರು ಆಯುಕ್ತ ನಾಗಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವು ನಡೆಯಿತು.

ಭೇಟಿ ವೇಳೆ, ಆಸ್ಪತ್ರೆ ಹೊರಗಿದ್ದ ಸಂತ್ರಸ್ತ ಕುಟುಂಬದವರು ಯುಜಿಡಿ ಪೈಪ್​ ನೀರು ಕುಡಿಯುವ ನೀರಿನ ಪೈಪ್​ ಸೇರಿರುವ ಆರೋಪ ಮಾಡಿದ್ದಲ್ಲದೇ ಸ್ಥಳೀಯ ನಗರಸಭೆ ಬೇಜವಾಬ್ದಾರಿ ಕೆಲಸ ದಿಂದ ಈ ಘಟನೆ ನಡೆದಿದೆ ಎಂದು ಆರೋಪ ಮಾಡಿದರು.

ಕೊಳ್ಳೇಗಾಲದಲ್ಲಿ ಏಳಕ್ಕೂ ಹೆಚ್ಚು ಮಂದಿ ದಿಢೀರ್ ಅಸ್ವಸ್ಥ: ಕಲುಷಿತ ನೀರು ಕುಡಿದಿರುವ ಶಂಕೆ ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ನಗರದ ಆಶ್ರಯ ಬಡಾವಣೆಯಲ್ಲಿ ಏಳಕ್ಕೂ ಹೆಚ್ಚು ಮಂದಿ ಅಸ್ವಸ್ತರಾಗಿದ್ದು, ಕಲುಷಿತ ನೀರಿನಿಂದ ಈ ಘಟನೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಅಸ್ವಸ್ತರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿದ್ದಾರೆ ಎಂಬ ವರದಿ ಪ್ರಸಾರ ಮಾಡಿತ್ತು.

ಈ ಸುದ್ದಿಯಿಂದ ಎಚ್ಚೆತ್ತ ತಾಲೂಕು ಆಡಳಿತ ಎಸಿ.ಗಿರೀಶ್ ದಿಲೀಪ್ ಬದೋಲೆ, ತಹಶೀಲ್ದಾರ್ ಕುನಾಲ್ ಜಂಟಿಯಾಗಿ ಭೇಟಿ ಅಸ್ವಸ್ಥರ ಯೋಗ ಕ್ಷಮ ವಿಚಾರಿಸಿ ಅಲ್ಲಿನ ವೈದ್ಯರ ಜೊತೆ ಮಾಹಿತಿ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.