ETV Bharat / state

ಚಾಮರಾಜನಗರ: ಮುಕ್ಕಾಲು ಶತಮಾನದ ಬಳಿಕ ವಿದ್ಯುತ್ ಬೆಳಕು ಕಂಡ ಪೌರಕಾರ್ಮಿಕರ ಕಾಲೊನಿ

ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ ಚಾಮರಾಜನಗರ ನಗರಸಭೆ ವ್ಯಾಪ್ತಿಯ ಕಾಲೊನಿಯೊಂದು ಬೀದಿ ದೀಪ ಸೌಲಭ್ಯವನ್ನು ಪಡೆದಿದೆ.

Street lights installed
ಬೀದಿ ದೀಪ ಅಳವಡಿಕೆ
author img

By

Published : Aug 19, 2021, 1:07 PM IST

ಚಾಮರಾಜನಗರ: ಅರ್ಧ ತಾಸು ವಿದ್ಯುತ್ ಕೈ ಕೊಟ್ಟರೆ ಪರಿತಪಿಸುವವರ ನಡುವೆ ಭಾರತ ಸ್ವತಂತ್ರಗೊಂಡ ಮುಕ್ಕಾಲು ಶತಮಾನದ ಬಳಿಕ ಚಾಮರಾಜನಗರದ ಪೌರ ಕಾರ್ಮಿಕರ ಕಾಲೊನಿ ವಿದ್ಯುತ್ ಬೆಳಕು ಪಡೆದಿದೆ.

ಚಾಮರಾಜನಗರ ನಗರಸಭೆ ವ್ಯಾಪ್ತಿಯ 9 ನೇ ವಾರ್ಡಿನಲ್ಲಿರುವ ಪೌರ ಕಾರ್ಮಿಕರ ಕಾಲೋನಿಯು 75 ವರ್ಷಗಳ ಬಳಿಕ ಬೀದಿದೀಪ ಕಂಡಿದೆ. ಈ ಕಾಲೋನಿಯಲ್ಲಿ 90ಕ್ಕೂ ಹೆಚ್ಚು ಮನೆಗಳಿದ್ದು, ನಾಲ್ಕು ಬೀದಿಗಳಿಗೆ ಕೇವಲ ಎರಡು ಕಂಬಗಳ ಮೂಲಕ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಬೀದಿ ದೀಪಗಳಿಲ್ಲದೆ ಸಂಜೆ 7 ಗಂಟೆಯಾದರೆ ಯಾರೂ ಓಡಾಡಲಾಗದ ಭಯದ ವಾತಾವರಣ ನಿರ್ಮಾಣವಾಗುತ್ತಿತ್ತು.

ಕೊನೆಗೂ ಬೆಳಕು ಕಂಡ ಕಾಲೊನಿ

ಇದನ್ನೂ ಓದಿ: ಜಾಗದ ವಿಚಾರ..‌ ನ್ಯಾಯಕ್ಕಾಗಿ ಅಧಿಕಾರಿಗಳ ಮುಂದೆಯೇ ವಿಷ ಸೇವಿಸಿದ ಯುವಕ- ವಿಡಿಯೋ

ಪೌರ ಕಾರ್ಮಿಕರ ಕಷ್ಟ ಕಂಡ ನಗರಸಭಾ ಸದಸ್ಯ ಗಾಳಿಪುರ ಮಹೇಶ್, ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರೊಟ್ಟಿಗೆ ನಿರಂತರವಾಗಿ ಮಾತುಕತೆ ನಡೆಸಿದ ಫಲವಾಗಿ ಈಗ 8 ಬೀದಿ ದೀಪ ಕಂಬಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಇದರಿಂದ ಇಡೀ ಕಾಲೋನಿ ಬೆಳಗಿದೆ.

ಸುಮಾರು 125 ವರ್ಷಗಳ ಇತಿಹಾಸವಿರುವ ಈ ಕಾಲೋನಿಗೆ, ಭಾರತ ಸ್ವಾತಂತ್ರ್ಯಗೊಂಡು 75 ವರ್ಷಗಳ ದಾರಿ ದೀಪದ ಭಾಗ್ಯ ಬಂದಿದೆ. ಕೊನೆಗೂ ದಾರಿ ದೀಪ ವ್ಯವಸ್ಥೆ ಆಯ್ತಲ್ಲ ಎಂಬುವುದು ಸಂತಸದ ವಿಚಾರವಾದರೂ, 75 ವರ್ಷಗಳ ತನಕ ಸೌಲಭ್ಯ ದೊರೆಯದಿರುವುದು ವಿಪರ್ಯಾಸ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.