ಚಾಮರಾಜನಗರ: ಏಪ್ರಿಲ್ 14 ರ ನಂತರ ಪರಿಸ್ಥಿತಿ ಅವಲೋಕಿಸಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಪರೀಕ್ಷಾ ದಿನಾಂಕ ನಿಗದಿಪಡಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಎಸ್ಎಸ್ಎಲ್ಸಿ ಮಕ್ಕಳು ಬಹಳಷ್ಟು ತಯಾರಿ ನಡೆಸಿದ್ದರು. ಆದರೆ, ಪರೀಕ್ಷೆ ಮುಂದೂಡಿಕೆಯಿಂದ ಮಕ್ಕಳು ನಿರಾಶರಾಗಬಾರದು, ಹತಾಶರಾಗಲೂ ಬಾರದು, ಕೇವಲ ಎಸ್ಎಸ್ಎಲ್ಸಿ ಅಷ್ಟೇ ಪರೀಕ್ಷೆಯಲ್ಲ, ಕೊರೊನಾ ವಿರುದ್ಧದ ಹೋರಾಟವೂ ಒಂದು ಪರೀಕ್ಷೆಯಾಗಿದೆ ಎಂದ್ರು. ಕೊರೊನಾ ವಿರುದ್ಧ ಪರೀಕ್ಷೆಯನ್ನ ಮನೆಯಿಂದ ಹೊರ ಬಾರದೆ ಗೆಲ್ಲಬೇಕು. ಈ ಒಂದು ಅವಕಾಶ ಬಳಸಿಕೊಂಡು ವಿದ್ಯಾರ್ಥಿಗಳು ಹೆಚ್ಚು ಪುನಾರಾವರ್ತಿಸಬೇಕಿದೆ. ಓದುವ ಪ್ರಕ್ರಿಯೆ ನಿಲ್ಲಿಸಬಾರದು, ಮಕ್ಕಳ ಆತಂಕ ನಮಗೆ ತಿಳಿದಿದೆ, ಸರ್ಕಾರ ವಿದ್ಯಾರ್ಥಿಗಳ ಜೊತೆಗಿದೆ ಎಂದು ಮಕ್ಕಳಿಗೆ ಧೈರ್ಯ ಹೇಳಿದ್ರು.