ಚಾಮರಾಜನಗರ: ಕಲಿಯುಗದ ಕಾಮಧೇನು ಎಂದೇ ಹೆಸರಾದ ಗುರುರಾಯರ ಪುಣ್ಯಾರಾಧನೆ ನಗರದಲ್ಲಿ ಭಕ್ತಿ-ಭಾವದಿಂದ ನಡೆಯಿತು.
ಮೂರನೇ ಶ್ರಾವಣ ಮಾಸವಾದ್ದರಿಂದ ಹಲವು ದೇಗುಲಗಳಲ್ಲಿ ಅನ್ನ ಸಂತರ್ಪಣೆ ನಡೆಯಿತು. ಉಳಿದಂತೆ, ಹರಳುಕೋಟೆ ಆಂಜನೇಯ ಸ್ವಾಮಿ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನಾಥನ ಬೆಟ್ಟದಲ್ಲಿ ವಿಶೇಷ ಪೂಜೆ ಜರುಗಿದವು. ಬೆಳಗ್ಗೆಯಷ್ಟೇ ಜಿಲ್ಲೆಯ ಹಲವೆಡೆ ತುಂತುರು ಮಳೆಯಾಗಿದ್ದನ್ನು ಬಿಟ್ಟರೇ ಭಕ್ತಾದಿಗಳು ದೇಗುಲಕ್ಕೆ ಭೇಟಿ ನೀಡಲು ವರುಣ ಬಿಡುವು ಕೊಟ್ಟಿದ್ದು ಅನುಕೂಲವಾಯಿತು.