ETV Bharat / state

ಕೋವಿಡ್​​ ನಿವಾರಣೆಗೆ ಮಾರಮ್ಮನ ಮೊರೆ ಹೋದ ಚಾಮರಾಜನಗರ ಜನತೆ! - special Worship in chamrajnagara

ರೂಪಾಂತರಗೊಂಡಿರುವ ಕೊರೊನಾ ಅಬ್ಬರಕ್ಕೆ ಜನರು ಭಯಭೀತರಾಗಿದ್ದಾರೆ. ಆದಷ್ಟು ಬೇಗ ಈ ಮಹಾಮಾರಿ ತೊಲಗಲಿ ಎಂದು ಗಂಗಾಮತಸ್ಥರ ಬೀದಿಯಲ್ಲಿ ಜನರೆಲ್ಲ ಸೇರಿ ಮಾರಮ್ಮನಿಗೆ ವಿಶೇಷ ಪೂಜೆ ಸಲ್ಲಿದ್ದಾರೆ..

special Worship in chamrajnagara to solve corona problem
ಕೋವಿಡ್​​ ನಿವಾರಣೆಗೆ ಮಾರಮ್ಮನ ಮೊರೆ ಹೋದ ಜನರು
author img

By

Published : May 22, 2021, 2:19 PM IST

ಚಾಮರಾಜನಗರ : ಕೊರೊನಾ ಮಹಾಮಾರಿ ತೊಲಗಿ ಜನ ಜೀವನ ಮೊದಲಿನಂತಾಗಲೆಂದು ನಗರದ ಗಂಗಾಮತಸ್ಥರ ಬೀದಿಯಲ್ಲಿ ಮಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿರುವ ಘಟನೆ ನಡೆದಿದೆ.

ಕೋವಿಡ್​​ ನಿವಾರಣೆಗೆ ಮಾರಮ್ಮನ ಮೊರೆ ಹೋದ ಜನರು..

ನಗರದ ಗಂಗಾಮತಸ್ಥರ ಬೀದಿಯಲ್ಲಿ ಜನರೆಲ್ಲ ಸೇರಿ ನಡು ರಸ್ತೆಯಲ್ಲಿ ಕಬ್ಬಿಣ ಹೂತು ಅದಕ್ಕೆ ಬೇವಿನ ಸೊಪ್ಪಿನಿಂದ ಪೂಜೆ ಸಲ್ಲಿಸಿ ಕೊರೊನಾ ತೊಲಗಲೆಂದು ಬೇಡಿಕೊಂಡಿದ್ದಾರೆ. ಆದಷ್ಟು ಬೇಗ ರೋಗ ಮಾಯವಾಗಲೆಂದು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: ಮುಖ್ಯಮಂತ್ರಿಯವರೇ ನನ್ನ ತಂದೆಯನ್ನು ಉಳಿಸಿಕೊಡಿ: ಕಣ್ಣೀರಿಡುತ್ತಾ ಸಿಎಂಗೆ ಯುವಕನ ಮನವಿ

ಕೊರೊನಾ ದೂರವಾಗಲಿದೆ ಎಂಬ ನಂಬಿಕೆಯಿಂದ 9 ಮುತ್ತೈದೆಯರು ಗಂಗೆ ತಂದು ಪೂಜೆ ಸಲ್ಲಿಸಿ ಬಳಿಕ ಬೀದಿಗೆಲ್ಲ ತೀರ್ಥ ಪ್ರೋಕ್ಷಣೆ ಮಾಡಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಈ ವಿಶೇಷ ಪೂಜೆ ಸಂದಿದೆ ಎಂದು ಸಮುದಾಯದ ಮುಖಂಡರು ತಿಳಿಸಿದ್ದಾರೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.