ಚಾಮರಾಜನಗರ: ಕೊರೊನಾ ಸೋಂಕಿನಿಂದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬೇಗ ಗುಣಮುಖರಾಗುವಂತೆ ಮಾದಪ್ಪನ ಬೆಟ್ಟದಲ್ಲಿ ಸಂಜೆ 7ರಿಂದ 8ರ ವರೆಗೆ ಏಕವಾರರುದ್ರಾಭಿಷೇಕ ಹಾಗೂ ಮಹಾ ಸಂಕಲ್ಪ ಪೂಜೆಯೊಂದಿಗೆ ಮಹಾಮಂಗಳಾರತಿಯನ್ನು ಪ್ರಧಾನ ಆಗಮಿಕರಾದ ಕರವೀರಸ್ವಾಮಿ ನೆರವೇರಿಸಿದರು.
ಸಿಎಂ ಮತ್ತು ಅವರ ಕುಟುಂಬ ವರ್ಗ ಶೀಘ್ರ ಸೋಂಕು ಮುಕ್ತವಾಗಲೆಂದು ಪ್ರಾರ್ಥಿಸಲಾಗಿದೆ ಎಂದು ಶ್ರೀಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.
ಸಿಎಂ ಯಡಿಯೂರಪ್ಪ ಮಲೆಮಹದೇಶ್ವರ ಬೆಟ್ಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದವರು ಇದರ ಉಪಾಧ್ಯಕ್ಷರಾಗಿರುತ್ತಾರೆ.