ETV Bharat / state

ಪಾಕೆಟ್​​ ಮನಿಗೆ ಬ್ರೇಕ್​​ ಹಾಕಿದ ಅಪ್ಪ... ಕೋಪದಲ್ಲಿ ಪಲ್ಸರ್​​ ಬೈಕ್​ಗೆ ಬೆಂಕಿಯಿಟ್ಟ ಮಗ! - Bike, angry, father, son

ಅಪ್ಪ ಪಾಕೆಟ್ ಮನಿ ಕೊಡಲು ನಿರಾಕರಿಸಿದ್ದಕ್ಕೆ ಮಗನೋರ್ವ ತನ್ನ ಬೈಕ್​ಗೆ ಬೆಂಕಿಯಿಟ್ಟಿದ್ದಾನೆ. ಬೆಂಕಿ ನಂದಿಸಲು ಹರಸಾಹಸಪಟ್ಟ ಸ್ಥಳೀಯರು. ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯಲ್ಲಿ ಘಟನೆ.

ಕೋಪದಲ್ಲಿ ಪಲ್ಸರ್ ಬೈಕ್​ಗೆ ಬೆಂಕಿಯಿಟ್ಟ ಮಗ
author img

By

Published : May 10, 2019, 6:26 PM IST

ಚಾಮರಾಜನಗರ: ಖರ್ಚಿಗೆ ಅಪ್ಪ ಹಣ ನೀಡದ ಪರಿಣಾಮ ಕೋಪಗೊಂಡ ಮಗನೋರ್ವ ತನ್ನ ಬೈಕಿಗೆ ಬೆಂಕಿ ಹಚ್ಚಿದ ಘಟನೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯಲ್ಲಿ ನಡೆದಿದೆ.

ಬೈಕಿಗೆ ಬೆಂಕಿ ಹಚ್ಚಿದ ವ್ಯಕ್ತಿಯನ್ನು ಮಹದೇವಸ್ವಾಮಿ ಎಂದು ಗುರುತಿಸಲಾಗಿದೆ. ತನ್ನ ತಂದೆ ಸಿದ್ದಶೆಟ್ಟಿ ಬಳಿ ಮಹದೇವಸ್ವಾಮಿ ಖರ್ಚಿಗೆ ಹಣ ಕೇಳಿದ್ದನಂತೆ. ಆದರೆ ಸಿದ್ದಶೆಟ್ಟಿ ಹಣ ನೀಡಲು ನಿರಾಕರಿಸಿದ್ದರು ಎನ್ನಲಾಗಿದೆ.

ಹಣ ನೀಡದಿದ್ದಕ್ಕೆ ಕುಪಿತಗೊಂಡ ಮಹದೇವಸ್ವಾಮಿ ಮನೆ ಮುಂದೆ ನಿಲ್ಲಿಸಿದ್ದ ತನ್ನ ಪಲ್ಸರ್ ಬೈಕಿಗೆ ಬೆಂಕಿ ಹಚ್ಚಿದ್ದಾನೆ. ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟರು. ಆದರೆ ಅಷ್ಟರಲ್ಲಾಗಲೇ ಬೈಕ್ ಸುಟ್ಟು ಕರಕಲಾಗಿತ್ತು. ಇನ್ನು ಘಟನೆಯಿಂದ ಕೆಲಕಾಲ ಆತಂಕ ನಿರ್ಮಾಣವಾಗಿತ್ತು.

Intro:ಖರ್ಚಿಗೆ ಅಪ್ಪ ಹಣ ನೀಡದಿದ್ದಕ್ಕೆ ತನ್ನ ಬೈಕಿಗೆ ಬೆಂಕಿ ಹಚ್ಚಿದ ಮಗ!

ಚಾಮರಾಜನಗರ: ಖರ್ಚಿಗೆ ಅಪ್ಪ ಹಣ ನೀಡದಿದ್ದಕ್ಕೇ ಮಗನೋರ್ವ ತನ್ನ ಬೈಕಿಗೆ ಬೆಂಕಿ ಹಚ್ಚಿದ ಘಟನೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯಲ್ಲಿ ನಡೆದಿದೆ.

Body:ಮಹದೇವಸ್ವಾಮಿ ಎಂಬಾತನೇ
ಬೈಕಿಗೆ ಬೆಂಕಿ ಹಚ್ಚಿದ ಭೂಪ. ಮಧುವನಹಳ್ಳಿಯ ತಂದೆ ಸಿದ್ದಶೆಟ್ಟಿ ಬಳಿ ಮಹದೇವಸ್ವಾಮಿ ಖರ್ಚಿಗೆ ಹಣ ಕೇಳಿದ್ದಕ್ಕೆ ಸಿದ್ದಶೆಟ್ಟಿ ನಿರಾಕರಿದ್ದಾರೆ ಎನ್ನಲಾಗಿದೆ.

ಹಣ ನೀಡದಿದ್ದಕ್ಕೆ ಕುಪಿತಗೊಂಡ ಮಹದೇವಸ್ವಾಮಿ ಮನೆ ಮುಂದೆ ನಿಲ್ಲಿಸಿದ್ದ ತನ್ನ ಪಲ್ಸರ್ ಬೈಕಿಗೆ ಬೆಂಕಿ ಹಚ್ಚಿ ಕೋಪ ತಣಿಸಿಕೊಂಡಿದ್ದಾನೆ. ಪೆಟ್ರೋಲ್ ಟ್ಯಾಂಕಿಗೆ ಬೆಂಕಿ ಹಚ್ಚಿದ್ದರಿಂದ ಅಕ್ಕಪಕ್ಕದ ಮನೆಯವರು ಟ್ಯಾಂಕ್ ಸಿಡಿಯಲಿದೆ ಎಂಬ ಭಯದಿಂದ ಕೆಲಕಾಲ ದೂರ ಉಳಿದು ಬಳಿಕ ನಂದಿಸುವ ಕೆಲಸ ಮಾಡಿದರಾದರೂ ಬೈಕ್ ಸುಟ್ಟು ಕರಕಲಾಗಿತ್ತು.

Conclusion:ಒಟ್ಟಿನಲ್ಲಿ ಅಪ್ಪನ ಮೇಲಿನ ಕ್ಷಣಿಕ ಕೋಪಕ್ಕೆ ಸಾವಿರಾರು ರೂ. ಮೌಲ್ಯದ ತನ್ನ ಬೈಕನ್ನು ಬೂದಿ ಮಾಡಿದ್ದಾನೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.