ETV Bharat / state

ಆಸ್ತಿ ವಿಚಾರಕ್ಕೆ ವೃದ್ಧ ತಾಯಿಗೆ ಒದ್ದು ಕ್ರೌರ್ಯ ಮೆರೆದ ಪಾಪಿ ಮಗ..! - ಕೊಳ್ಳೇಗಾಲ ಅಪರಾಧ ಸುದ್ದಿ

ಆಸ್ತಿ ವಿಚಾರ ವಯಸ್ಸಾದ ತಾಯಿಯ ಮೇಲೆ ಮಗ ಹಲ್ಲೆ ನಡೆಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದ್ದು, ಕೊಳ್ಳೇಗಾಲ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

son kicked his mother
ತಾಯಿಯನ್ನು ಒದ್ದ ಮಗ
author img

By

Published : Jul 1, 2020, 2:02 PM IST

ಕೊಳ್ಳೇಗಾಲ (ಚಾಮರಾಜನಗರ): ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಗನೇ ಹೆತ್ತ ತಾಯಿಗೆ ಒದ್ದು ಕ್ರೌರ್ಯ ಮರೆದಿರುವ ಘಟನೆ ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೊಳ್ಳೇಗಾಲ ತಾಲೂಕಿನ ಉಗನಿ ಗ್ರಾಮದ ರಾಜಮ್ಮ ಹಲ್ಲೆಗೊಳಗಾದ ಸಂತ್ರಸ್ತೆಯಾಗಿದ್ದು, ಆತನ ಮಗ ದೊರೆಸ್ವಾಮಿ ಎಂಬುವವ ಹಲ್ಲೆ ನಡೆಸಿ, ಕ್ರೌರ್ಯ ಮೆರೆದಿದ್ದಾನೆ.

ತಾಯಿಯನ್ನು ಒದ್ದ ಮಗ

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆಯುತ್ತಿರುವ ವೇಳೆ ದೊರೆಸ್ವಾಮಿ ತನ್ನ ತಾಯಿಗೆ ಒದ್ದಿದ್ದಾನೆ. ಈ ವೇಳೆ, ಕುಸಿದು ಬಿದ್ದ ರಾಜಮ್ಮಳನ್ನು ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಗನ ಕ್ರೌರ್ಯದ ವಿಡಿಯೋ ಸೆರೆಯಾಗಿದ್ದು, ತಾಯಿ ರಾಜಮ್ಮ ತನ್ನ ಮಗ ದೊರೆಸ್ವಾಮಿ, ಆತನ ಪತ್ನಿ ಹಾಗೂ ಸ್ನೇಹಿತರ ಮೇಲೆ ಕೊಳ್ಳೇಗಾಲ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.