ETV Bharat / state

ಖದೀಮರೇ, ಬೇಟೆಗಾರರೇ ಎಚ್ಚರ-ಎಚ್ಚರ.. ಬಿಆರ್​​ಟಿಗೆ ಬಂದಾಯ್ತು ಸ್ನೈಪರ್ ಡಾಗ್ ಝಾನ್ಸಿ! - ಬೇಟೆಗಾರರ ಪತ್ತೆಗೆ ಶ್ವಾನ ಬಳಕೆ

ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶಕ್ಕೆ ಝಾನ್ಸಿ ಎಂಬ ಜರ್ಮನ್ ಶೆಫರ್ಡ್ ತಳಿಯ ಶ್ವಾನವು ಚಂಡೀಘಡದಲ್ಲಿ ಸ್ವಯಂ ಸೇವಾ ಸಂಸ್ಥೆಯಾದ ಟ್ರಾಫಿಕ್ ಮತ್ತು ಡಬ್ಲೂಡಬ್ಲೂಎಫ್-ಇಂಡಿಯಾದಿಂದ ಇಂಡೋ ಟಿಬೆಟಿನ್ ಬಾರ್ಡರ್ ಪೊಲೀಸ್ ಫೋರ್ಸ್ ಶಿಬಿರದಲ್ಲಿ 7 ತಿಂಗಳ ಕಠಿಣ ತರಬೇತಿ ಬಳಿಕ ಇಂದು ಕಾರ್ಯಾರಂಭ ಮಾಡಿದೆ. ಈ ಶ್ವಾನ ಬಳಸಿಕೊಂಡು ಮರಗಳ್ಳತನ, ಕಳ್ಳಬೇಟೆಗಳಂತಹ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ವಿಶ್ವಾಸ ಅರಣ್ಯಾಧಿಕಾರಿಗಳದ್ದಾಗಿದೆ.

sniper-dog-jhansi-started-working-in-brt
ಸ್ನೈಪರ್ ಡಾಗ್ ಝಾನ್ಸಿ
author img

By

Published : Nov 25, 2021, 5:54 PM IST

ಚಾಮರಾಜನಗರ: ತನ್ನ ಶಕ್ತಿ, ಚತುರಮತಿ, ಸೂಕ್ಷ್ಮ ಬೇಟೆಗಾರನ ಬಲವನ್ನು ತೋರಿಸಿರುವ ಬಂಡೀಪುರದ ರಾಣಾದಂತೆ ಬಿಆರ್​ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆಗಾರರ ಸೊಕ್ಕಡಗಿಸಲು ಝಾನ್ಸಿ ಎಂಬ ಸ್ನೈಪರ್ ಡಾಗ್ ತರಬೇತಿ ಮುಗಿಸಿಕೊಂಡು ಇಂದು ಎಂಟ್ರಿ ಕೊಟ್ಟಿದೆ.

ಬಿಆರ್​​ಟಿಗೆ ಬಂದ ಬೇಟೆಗಾರರ ಬೇಟೆಯಾಡೊ ರಣ ಬೇಟೆಗಾರ ಸ್ನೈಪರ್ ಡಾಗ್ ಝಾನ್ಸಿ..!

ಬಂಡೀಪುರದಲ್ಲಿ ತನ್ನ ಪರಾಕ್ರಮ ಮೆರೆಯುತ್ತಿರುವ ರಾಣಾದಂತೆ ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶಕ್ಕೆ(BRT) ಝಾನ್ಸಿ ಎಂಬ ಜರ್ಮನ್ ಶೆಫರ್ಡ್ ತಳಿಯ ಶ್ವಾನವು ಚಂಡೀಘಡದಲ್ಲಿ ಸ್ವಯಂ ಸೇವಾ ಸಂಸ್ಥೆಯಾದ ಟ್ರಾಫಿಕ್ ಮತ್ತು ಡಬ್ಲೂಡಬ್ಲೂಎಫ್-ಇಂಡಿಯಾದಿಂದ ಇಂಡೋ-ಟಿಬೆಟಿನ್ ಬಾರ್ಡರ್ ಪೊಲೀಸ್ ಫೋರ್ಸ್ (ಬಿಟಿಸಿ-ಐಟಿಬಿಪಿ) ಶಿಬಿರದಲ್ಲಿ 7 ತಿಂಗಳ ಕಠಿಣ ತರಬೇತಿ ಬಳಿಕ ಇಂದು ಬಿಆರ್​​ಟಿಗೆ ಬಂದು ಕಾರ್ಯಾರಂಭ ಮಾಡಿದೆ.

sniper-dog-jhansi-started-working-in-brt
ಝಾನ್ಸಿ ಜೊತೆ ತರಬೇತಿ ಪಡೆದ ಫಾರೆಸ್ಟ್ ಗಾರ್ಡ್

ಸದ್ಯಕ್ಕೆ ಪುಣಜನೂರು ವಲಯದಲ್ಲಿ ಶ್ವಾನವನ್ನು ಬಳಸಿಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ. ಝಾನ್ಸಿಯನ್ನು ನೋಡಿಕೊಳ್ಳಲು ಫಾರೆಸ್ಟ್ ಗಾರ್ಡ್ ಬಸವರಾಜು ಹಾಗೂ ವಾಚರ್ ಸಿದ್ದರಾಮಣ್ಣ ಎಂಬವರಿಗೂ ತರಬೇತಿ ಕೊಡಲಾಗಿದೆ.

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಈವರೆಗೂ ಸ್ನೈಪರ್ ಡಾಗ್ ಒಂದೂ ಕೂಡ ಇರಲಿಲ್ಲ. ಇದೇ ಮೊದಲ ಬಾರಿಗೆ ಝಾನ್ಸಿ ಬಿಆರ್‌ಟಿಗೆ ಕಾಲಿಟ್ಟಿದ್ದು, ಈ ಶ್ವಾನ ಬಳಸಿಕೊಂಡು ಮರಗಳ್ಳತನ, ಕಳ್ಳಬೇಟೆಗಳಂತಹ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ವಿಶ್ವಾಸ ಅರಣ್ಯಾಧಿಕಾರಿಗಳದ್ದಾಗಿದೆ.

ಈಗಾಗಲೇ ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾಣಾ ಮತ್ತು ಮುಧೋಳ್ ತಳಿಯ ಶ್ವಾನಗಳಿವೆ. ಕಳ್ಳಬೇಟೆಗಾರರು, ಹುಲಿ ಪತ್ತೆ ಕಾರ್ಯಾಚರಣೆ, ಇನ್ನಿತರ ಅರಣ್ಯ ಅಪರಾಧ ಪ್ರಕರಣ ಪತ್ತೆಗೆ ಝಾನ್ಸಿ ಅರಣ್ಯ ಇಲಾಖೆಗೆ ವರವಾಗಿ ಪರಿಣಮಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.