ಚಾಮರಾಜನಗರ: ಮೇಕೆದಾಟು ಪಾದಯಾತ್ರೆ ಹಿನ್ನೆಲೆಯಲ್ಲಿ ಇಂದು ಚಾಮರಾಜನಗರದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಥಳೀಯ ಮುಖಂಡರೊಟ್ಟಿಗೆ ಜಂಟಿ ಪೂರ್ವಭಾವಿ ಸಭೆ ನಡೆಸಲಿದ್ದಾರೆ.
ಈ ಹಿಂದೆ ಡಿಕೆಶಿ ಸಿಂಗಲ್ ಟೂರ್ ಪ್ಲಾನ್ ಮಾಡಿಕೊಂಡಿದ್ದರಿಂದ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದರು. ಸಿದ್ದರಾಮಯ್ಯ ತಾಕೀತಿನಿಂದ ಇಂದು ಚಾಮರಾಜನಗರದಲ್ಲಿ ಹಾಗೂ ನಾಳೆ ಮೈಸೂರಿನಲ್ಲಿ ಇಬ್ಬರು ನಾಯಕರು ಪೂರ್ವಭಾವಿ ಸಿದ್ಧತೆಗಾಗಿ ಇಬ್ಬರೂ ನಾಯಕರು ಸಭೆ ನಡೆಸುವರು.
ಇದಕ್ಕೂ ಮುನ್ನ ನಗರದ ಸರ್ಕಾರಿ ಅತಿಥಿ ಗೃಹದ ಬಳಿಯಿಂದ ಹಳೇ ಖಾಸಗಿ ಬಸ್ ನಿಲ್ದಾಣದವರೆಗೆ ಪಾದಯಾತ್ರೆ ನಡೆಸಲಿದ್ದು, ಬಳಿಕ ಕಾರ್ಯಕರ್ತರೊಂದಿಗೆ ಸಮಾವೇಶ ನಡೆಸಲಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಯೋಜನೆ ಅನುಷ್ಠಾನ ತಾಂತ್ರಿಕವಾಗಿ ಸರಳೀಕರಿಸಲಾಗುತ್ತಿದೆ: ಸಚಿವ ವಿ.ಸೋಮಣ್ಣ